ಹಾಸನ: ಮಾಜಿ ಸಿಎಂ ಹೆಚ್.ಡಿ.ಕು`ಮಾರಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಇಂದು ಕೆ.ಆರ್.ಪೇಟೆಗೆ ತೆರಳೋ ಮಾರ್ಗ ಮಧ್ಯೆ ಹಾಸನಕ್ಕೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಕೊಟ್ಟ ಅವಕಾಶದಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಇವತ್ತು ಒಳ್ಳೆಯವರಿಗೆ ರಾಜಕಾರಣ ಇಲ್ಲ. ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಅಧಿಕಾರದ ಅಪೇಕ್ಷೆಯಿಂದ ಕುತಂತ್ರದ ರಾಜಕೀಯ ನಡೆಯುತ್ತಿದೆ. ಈ ರಾಜಕೀಯ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕು ಎಂದು ಅಂದುಕೊಂಡಿದ್ದೆ. ನನಗೆ ರಾಜಕೀಯದಲ್ಲಿ ಮುಂದುವರಿಯಲೇ ಬೇಕೆಂಬ ಹುಚ್ಚಿಲ್ಲ ಎಂದು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದರು.
ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಜನರು ನೋಡಿದ್ದು, ಅವರೇ ತೀರ್ಮಾನ ಮಾಡುತ್ತಾರೆ. ನಮ್ಮದು ಪಾಪದ ಸರ್ಕಾರ ಇತ್ತು ಈಗ ಪವಿತ್ರದ ಸರ್ಕಾರ ನಡೆಸುತ್ತಿದ್ದಾರೆ. ನಡೆಸಲಿ ಕಾದು ನೋಡೋಣ, ಯಾರು ಯಾರನ್ನು ಪವಿತ್ರ ಮಾಡುತ್ತಾರೆ. ನಾನು ಮಾತನಾಡೋಕೆ ಏನಿದೆ, ಏನೂ ಮಾತನಾಡಲ್ಲ ಎನ್ನುತ್ತಲೇ ಕುಮಾರಸ್ವಾಮಿ ಅವರು ಸರ್ಕಾರವನ್ನು ಕುಟುಕಿದರು.