ಹಾಸನ: ಹೊಳೆನರಸೀಪುರದ (Holenarasipur) ಚಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ಅಪಘಾತದಿಂದ (Accident) ಮೃತಪಟ್ಟ ಪುತ್ರನ ಅಂಗಾಂಗ ದಾನ (Organ Donation) ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಗ್ರಾಮದ ರವಿ (31) ಮೂರು ತಿಂಗಳ ಹಿಂದೆ ಪಾರಸನಹಳ್ಳಿ ಗ್ರಾಮದ ಬಳಿ ನಡೆದ ಹಿಟ್ & ರನ್‌ನಲ್ಲಿ ಗಂಭಿರವಾಗಿ ಗಾಯಗೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅ.3 ರಂದು ಸಾವನ್ನಪ್ಪಿದ್ದರು. ಇದನ್ನೂ ಓದಿ: ನೆಚ್ಚಿನ ನಟನಿಗಾಗಿ ತನ್ನ, ಕುಟುಂಬಸ್ಥರ ಅಂಗಾಗ ದಾನ ಮಾಡಿದ ಅಭಿಮಾನಿ
ಮಗನ ಸಾವಿನ ಬಳಿಕ ಪೋಷಕರು ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರವಿಯವರು ಕ್ರಿಕೆಟಿಗ ವಿರಾಟ್ ಕೊಹ್ಲಿ ತದ್ರೂಪಿಯಂತಿದ್ದರು. ಇದನ್ನೂ ಓದಿ: ಬಸ್ ಪಲ್ಟಿ- ಮಾನವೀಯತೆ ಮೆರೆದ್ರು ಮೃತ ವಿದ್ಯಾರ್ಥಿನಿಯ ಪೋಷಕರು

