ಹಾಸನ: ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಸನದಿಂದ ರೈತರು ದಯಾಮರಣ ಕೋರಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ.
ಕೆರೆ ಕಟ್ಟೆಗೆ, ದನ ಕರುಗಳಗಳಿಗೆ ನೀರು ನೀಡಿ ಇಲ್ಲಾ ದಯಾಮರಣ ನೀಡಿ ಅಂತ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಪಂಚಾಯಿತಿ ವ್ಯಾಪ್ತಿಯ ರೈತರು ಈ ರೀತಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ತಾಲೂಕಿನ ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣವೂ ಕಡಿಮೆ ಆಗಿದ್ದು, ಅಂತರ್ಜಲ ಸಂಪೂರ್ಣ ಕುಸಿದಿದೆ. ಈ ಸಮಸ್ಯೆ ಕಳೆದ ಮೂರು ದಶಕಗಳಿಂದ ಮುಂದುವರಿದಿದೆ.
Advertisement
Advertisement
ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಯುವ ಬಾಗೂರು ಸುರಂಗ ಮಾರ್ಗ ಇಲ್ಲಿ ಹಾದು ಹೋಗಿದ್ದು ಹಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿಯಲು ಕಾರಣವಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿಗಾಗಿ ಸಾಕಷ್ಟು ಹೋರಾಟಗಳೂ ನಡೆದಿದೆ. ಈ ಭಾಗದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ನೀರಿಗಾಗಿ ಮನವಿ ಮಾಡುತ್ತಲೆ ಇರುವ ಈ ರೈತರ ಮನವಿಗಳು ಈಗಲೂ ಮುಂದುವರೆದಿದೆ.
Advertisement
ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯಾಗ್ತಿದ್ರೂ ಇಲ್ಲಿನ ಜನ ಮಾತ್ರ ಬೆಳೆ ಬೆಳೆಯಲು ಆಗ್ತಿಲ್ಲ, ಈಗಾಗಿ ಬದಕಲು ಆಗದ ಸ್ಥಿತಿಯನ್ನು ತಲುಪಿದ್ದೇವೆ. ಈಗಲಾದ್ರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಕೋರಿದ್ದಾರೆ. ಇತ್ತೀಚೆಗೆ ರೈತನೊರ್ವ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ವೀಡಿಯೋ ಕೂಡ ವೈರಲ್ ಆಗಿತ್ತು. ಇದನ್ನೂ ಓದಿ: ಸಾಲಮನ್ನಾ ಬೇಡ, ನಮ್ಗೆ ನೀರು ಕೊಡಿ ಸ್ವಾಮಿ- ಹಾಸನದಲ್ಲಿ ನೀರಿಗಾಗಿ ರೈತನ ಅಳಲು
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews