– ಇಂದು ನಾಲ್ವರು ಸಚಿವರು, ಹೈಕೋರ್ಟ್ ನ್ಯಾಯಾಧೀಶರಿಂದ ದೇವಿ ದರ್ಶನ
ಹಾಸನ: ಹಾಸನಾಂಬೆ ದೇವಿ (Hasanamba) ದರ್ಶನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಕಾರಣ ದೇವಿ ದರ್ಶನ ವಿಳಂಬವಾಗುತ್ತಿದೆ.
Advertisement
ಮುಂಜಾನೆ ಎರಡು ಗಂಟೆಗೂ ಹೆಚ್ಚು ಕಾಲ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಿದ್ದರಿಂದ ದೇವಿ ದರ್ಶನ (Hasanamba Darshan) ಇನ್ನೂ ವಿಳಂಬವಾಗಿ ಆರಂಭವಾಗಿದೆ. ಇದರ ನಡುವೆ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮಳೆಯಲ್ಲಿಯೇ ಭಕ್ತರು ನಿಂತಿದ್ದರು. ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
Advertisement
Advertisement
ದರ್ಶನದ ಎಲ್ಲಾ ಸಾಲುಗಳು ಭರ್ತಿಯಾಗಿವೆ. 1000, 300, ಧರ್ಮ ದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಗರ್ಭಗುಡಿ ಬಳಿ ನೂಕುನುಗ್ಗಲು ಉಂಟಾಗಿದ್ದು, ಗರ್ಭಗುಡಿ ಎದುರು ಎಸ್ಪಿ ಮಹಮದ್ ಸುಜೇತಾ ಅವರು ನೆಲದ ಮೇಲೆ ಕುಳಿತು ಜನರನ್ನು ನಿಯಂತ್ರಿಸುತ್ತಿದ್ದಾರೆ.
Advertisement
ದರ್ಶನ ವಿಳಂಬವಾಗುತ್ತಿರುವ ಹಿನ್ನೆಲೆ ಹಿರಿಯ ನಾಗರಿಕರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಇಂದು (ಗುರುವಾರ) ನಾಲ್ವರು ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರುಗಳು ದೇವಿ ದರ್ಶನ ಪಡೆಯಲಿದ್ದಾರೆ.