ಸರ್ಕಾರಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಹಾಸನ ಎಸಿ

Public TV
1 Min Read
hassan ac

ಹಾಸನ: ಸರ್ಕಾರಿ ನೌಕರನಿಗೆ ಎಸಿ (Assistant Commissioner) ಬಿ.ಎ. ಜಗದೀಶ್ ಕಪಾಳ ಮೋಕ್ಷ ಮಾಡಿ ದರ್ಪ ತೋರಿದ ಘಟನೆ ಹಾಸನಾಂಬೆ ದೇಗುಲದಲ್ಲಿ (Hasanamba Temple) ನಡೆದಿದೆ.

ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಘಟನೆ ನಡೆದಿದ್ದು, ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡರಿಗೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ. ನೂರಾರು ಜನರು ಒಳ ಬರುತ್ತಿದ್ದಾಗ ಅವರ ಜೊತೆಯಲ್ಲಿಯೇ ಜಿಲ್ಲಾ ಪಂಚಾಯಿತಿ ನೌಕರ ಶಿವೇಗೌಡರು ಬಂದಿದ್ದರು. ಆ ವೇಳೆ ಎಸಿ ಜಗದೀಶ್ ಆತನನ್ನು ತಡೆದು, ಯಾಕೋ ಓಡಿ ಬರುತ್ತಿದ್ದಿಯಾ, ನಿನಗೆ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದನೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಹಲ್ಲೆ

ತಾನು ಜಿ.ಪಂ. ನೌಕರ ಎಂದು ಶಿವೇಗೌಡ ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ಎಸಿ ಜಗದೀಶ್ ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದಿದ್ದು, ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾರೆ. ಸಣ್ಣ ಕಾರಣಕ್ಕೆ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದ ಎಸಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ತಾಯಿ ಸನ್‍ಸ್ಕ್ರೀನ್ ಕಳಿಸಿದ್ರು, ನಾನು ಬಳಸಲ್ಲ: ರಾಹುಲ್ ಗಾಂಧಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *