ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ದಿನಗಳು ಕಳೆದಿವೆ. ಪೈರಸಿ, ನೆಗೆಟಿವ್ ಪ್ರಚಾರ ಸೇರಿದಂತೆ ಹಲವು ಅಡೆತಡೆಗಳನ್ನು ಸಿನಿಮಾ ಎದುರಿಸುತ್ತಿದ್ದರೂ, ಈ ನಡುವೆ 100 ಕೋಟಿ ಕ್ಲಬ್ ಸೇರಿದಂತೆ ಎಂದು ಅಭಿಮಾನಿಗಳು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ. ಸಿನಿಮಾ ಟೀಮ್ ಅಧಿಕೃತವಾಗಿ ಈ ಮಾಹಿತಿಯನ್ನು ಕೊಡದೇ ಇದ್ದರೂ, ಸಿನಿಮಾ ರಿಲೀಸ್ ಆಗಿ ನಾಲ್ಕೇ ದಿನಕ್ಕೆ ನೂರು ಕೋಟಿ ಬಾಚಿದೆ ಎಂದು ಹೇಳಲಾಗುತ್ತಿದೆ.
Advertisement
ಸಿನಿಮಾ ರಿಲೀಸ್ ಆದ ದಿನ ಬರೋಬ್ಬರಿ 35 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂತು ಎಂದು ಹೇಳಲಾಯಿತು. ಹೆಚ್ಚು ಕಡಿಮೆ ಸಿನಿಮಾ ಟೀಮ್ ಕೂಡ ಅದನ್ನು ಒಪ್ಪಿಕೊಂಡಿತು. ಗುರುವಾರ ನಂತರ ಕಲೆಕ್ಷನ್ ವಿಚಾರದಲ್ಲಿ ಮತ್ತಷ್ಟು ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರ ರಿಲೀಸ್ ಆದ ನಾಲ್ಕೇ ದಿನಕ್ಕೆ ಅಂದಾಜು 100 ಕೋಟಿ ರೂಪಾಯಿ ವಿತರಕರ ಜೇಬಿಗೆ ಬಂದಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ
Advertisement
Advertisement
ಆದರೆ, ಸ್ಯಾಂಡಲ್ ವುಡ್ ವಿತರಕರು ಹೇಳುವುದೇ ಬೇರೆ. ಮೊದಲ ದಿನ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಆಗಿದೆ. ಎರಡನೇ ದಿನ ಕೊಂಚ ಮಟ್ಟಿಕೆ ಇಳಿಕೆ ಕಂಡಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ಇರುವುದರಿಂದ ಕಲೆಕ್ಷನ್ ಹೆಚ್ಚಿದೆ. ಹೀಗಾಗಿ ಸೋಮವಾರದ ಕಲೆಕ್ಷನ್ ಒಟ್ಟು ಮಾಡಿದರೆ, ಬಹುಶಃ ಐದು ದಿನದ ಗಳಿಕೆ ಒಟ್ಟು 100 ಕೋಟಿ ಎನ್ನಬಹುದು. ಹೀಗಾಗಿ ಐದು ದಿನಕ್ಕೆ ವಿಕ್ರಾಂತ್ ರೋಣ 100 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲು ಅಡ್ಡಿಯಿಲ್ಲ ಎನ್ನುತ್ತಾರೆ.
Advertisement
ಈ ಹಿಂದೆ ಸಿನಿಮಾ ತಂಡವೇ ಹೇಳಿಕೊಂಡಂತೆ ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ಸಿನಿಮಾ ರಿಲೀಸ್ ಗೂ ಮುನ್ನ ವಾಪಸ್ಸು ಬಂದಿದೆ. ಹಾಗಾಗಿ ಥಿಯೇಟರ್ ನಿಂದ ಬಂದ ಹಣ ಲಾಭ ಎನ್ನಬಹುದೆ? ಅಥವಾ ವಿತರಕರು ಅಡ್ವಾನ್ಸ್ ಕೊಟ್ಟಿದ್ದ ಹಣವನ್ನೂ ಹಿಡಿದು 100 ಕೋಟಿ ರೂಪಾಯಿ ಲೆಕ್ಕಾಚಾರ ಹಾಕಲಾಗುತ್ತಿದೆಯಾ ಎನ್ನುವುದು ಕ್ಲ್ಯಾರಿಟಿ ಸಿಕ್ಕಿಲ್ಲ. ಆದರೂ, ಕನ್ನಡದ ಮತ್ತೊಂದು ಸಿನಿಮಾ ಈ ವರ್ಷ 100 ಕೋಟಿ ಕ್ಲಬ್ ಸೇರುವ ಮೂಲಕ ಸಿನಿ ಇತಿಹಾಸದಲ್ಲಿ ದಾಖಲಾಗಿದೆ.