ಮೊನ್ನೆಯಷ್ಟೇ ರಿಲೀಸ್ ಆಗಿರುವ ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್, ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕೊಂಬಿನ ಕುದುರೆ ಏರಿ ಬಂದ ಉಪೇಂದ್ರ ಅವರು ತಮ್ಮ ಸಿನಿಮಾದ ಪೋಸ್ಟರ್ ಅನ್ನು ಬೇರೆ ಸಿನಿಮಾದಿಂದ ಎರವಲು ಪಡೆದ್ರಾ ಅಥವಾ ಏನೂ ಗೊತ್ತಿಲ್ಲದೇ ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ತಯಾರು ಮಾಡಿದ್ರಾ ಎನ್ನುವ ಪ್ರಶ್ನೆಯನ್ನು ಹಲವು ಸೋಷಿಯಲ್ ಮೀಡಿಯಾ ಮೂಲಕ ಕೇಳಿದ್ದಾರೆ. ಅದಕ್ಕೆ ಪೂರಕ ದಾಖಲೆಯನ್ನು ಅವರು ನೀಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
Advertisement
ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ ಜೇಮ್ಸ್ ಡಿಮೊನಾಕೋ ಅವರು ಬರೆದು, ನಿರ್ಮಿಸಿದ ‘ದಿ ಫಾರೆವರ್ ಪರ್ಜ್’ ಸಿನಿಮಾದ ಪೋಸ್ಟರ್ ಗೂ ಮತ್ತು ಉಪೇಂದ್ರ ಅವರು ಬಿಡುಗಡೆ ಮಾಡಿರುವ ಪೋಸ್ಟರ್ ಗೂ ಸಾಕಷ್ಟು ಹೋಲಿಕೆ ಕಾಣುತ್ತದೆ. ಹೀಗಾಗಿ ಬಹುತೇಕ ಇದೇ ಸಿನಿಮಾದ ಸ್ಫೂರ್ತಿಯಿಂದಾಗಿ ರಿಯಲ್ ಸ್ಟಾರ್ ತಮ್ಮ ಸಿನಿಮಾದ ಪೋಸ್ಟರ್ ತಯಾರಿಸಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್
Advertisement
Advertisement
ಉಪೇಂದ್ರ ಅವರ ಪೋಸ್ಟರ್ ನಲ್ಲಿ ಗತಿಸಿದ ಇತಿಹಾಸ, ಮಸೀದೆ, ದೇವಾಲಯ, ಚರ್ಚ್ ಗಳ ಅವಶೇಷಗಳಿವೆ. ರೈಲಿದೆ, ಸ್ಯಾಟ್ ಲೈಟ್ ಕೂಡ ಕಾಣುತ್ತದೆ. ನಶಿಸಿದ ನಾಗರೀಕತೆಯ ಕುರುಹುಗಳಿವೆ. ಎರಡು ಕಾಲ ಘಟ್ಟವನ್ನು ಬೆಸೆಯುವಂತಹ ಧೀರನಾಗಿ ಕಲ್ಕಿ ಅವತಾರವಿದೆ. ‘ದಿ ಫಾರೆವರ್ ಪರ್ಜ್’ ನಲ್ಲಿ ಯುಎಸ್ ಕಾರ್ಟೆಲ್ ಗಳ ಹಿಂಸಾಚಾರದಿಂದ ಪಾರಾಗಲು ಗಡಿ ದಾಟಿದ ಮೆಕ್ಸಿಕನ್ ವಲಸಿಗರ ಮೇಲಿನ ಕಥೆ ಈ ಸಿನಿಮಾದಲ್ಲಿದೆ. ಹೀಗಾಗಿ ಬಹಳಷ್ಟು ಅಂಶಗಳು ಎರಡೂ ಸಿನಿಮಾದ ಕೊಡುಕೊಳ್ಳುವಿಕೆಯ ಭಾಗವಾಗಿವೆಯಾ ಎಂಬ ಅನುಮಾನ ಕೂಡ ಮೂಡುತ್ತದೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?
Advertisement
ಇದರ ಜತೆಗೆ ಇನ್ನೂ ಎರಡು ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಪೋಸ್ಟರ್ ಗಳು ಯಾವ ಸಿನಿಮಾದ್ದು ಎನ್ನುವ ಹುಡುಕಾಟ ಕೂಡ ನಡೆದಿದೆ. ಈ ಎಲ್ಲದರ ಸ್ಫೂರ್ತಿಯಿಂದಾಗಿಯೇ ಉಪ್ಪಿ ತಮ್ಮ ಚಿತ್ರದ ಪೋಸ್ಟರ್ ರೆಡಿ ಮಾಡಿದ್ದಾರಾ ಎಂದು ಅವರೇ ಸ್ಪಷ್ಟ ಪಡಿಸಬೇಕು.