ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸೆಕ್ಸಿ ಆಗಿರುವಂತಹ ವಿಶೇಷ ಫೋಟೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಫೋಟೋದ ಜೊತೆ ಹಾಕಿರುವ ಕ್ಯಾಪ್ಷನ್ ಕೂಡ ನಾನಾ ಚರ್ಚೆಗೆ ಕಾರಣವಾಗಿದ್ದು, ಡಿಸೆಂಬರ್ ಹೊತ್ತಿಗೆ ಇವರು ಎರಡನೇ ಮದುವೆ ಆಗಲಿದ್ದಾರಾ ಎನ್ನುವ ಸುದ್ದಿಯು ದಟ್ಟವಾಗಿದೆ. ಕಳೆದ ಐದಾರು ತಿಂಗಳಿಂದ ಇವರ ಮದುವೆ ವಿಚಾರ ಹರಿದಾಡುತ್ತಿದ್ದು, ಇದೀಗ ಅದನ್ನು ಅಧಿಕೃತಗೊಳಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
Advertisement
ನಾಚಿಕೊಳ್ಳುವ ಫೋಟೊದ ಜೊತೆಗೆ ‘ನಾನು ಯಸ್ ಅಂದೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಮದುವೆಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ತಮಗಿಂತ ಹತ್ತು ವರ್ಷ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ (Arjun Kapoor) ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿದ್ದು, ಅವರನ್ನೇ ಮದುವೆ ಆಗಲಿದ್ದಾರೆ. ಅರ್ಜುನ್ ಮತ್ತು ಮಲೈಕಾ ಈಗಾಗಲೇ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, ಮದುವೆ ಎಂಬ ಮುದ್ರೆಯಷ್ಟೇ ಬೀಳಬೇಕಿದೆ. ಇದನ್ನೂ ಓದಿ:ಮುತ್ತೆತ್ತರಾಯನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್
Advertisement
Advertisement
1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ (Arbaaz Khan) ಅವರನ್ನು ಮದುವೆ ಆಗಿದ್ದ ಮಲೈಕಾ, ಆನಂತರ ಅವರಿಂದ ವಿಚ್ಚೇದನೆ ಪಡೆದರು. ಕೆಲ ವರ್ಷಗಳ ಕಾಲ ಒಂಟಿಯಾಗಿಯೇ ಇದ್ದರು. ಆನಂತರ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿ ತೊಡಗಿದರು. ಅರ್ಬಾಜ್ ಮತ್ತು ಮಲೈಕಾಗೆ ಓರ್ವ ಪುತ್ರನಿದ್ದು, ಮಗ ಬಂದಾಗ ಇಬ್ಬರೂ ವಿಮಾನ ನಿಲ್ದಾಣಕ್ಕೆ ಹೋಗಿ ಮಗನನ್ನು ವಿದೇಶಕ್ಕೆ ಕಳುಹಿಸಿಯೂ ಬಂದಿದ್ದರು.
Advertisement
ಅಂದುಕೊಂಡಂತೆ ಎಲ್ಲ ನಡೆದರೆ, ಈ ವರ್ಷ ಡಿಸೆಂಬರ್ ಒಳಗೆ ಅರ್ಜುನ್ ಕಪೂರ್ ಮತ್ತು ಮಲೈಕೆ ವಿವಾಹವಾಗಲಿದ್ದಾರೆ. ಆಪ್ತರಷ್ಟೇ ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅರ್ಜುನ್ ಕಪೂರ್ ಕುಟುಂಬಕ್ಕೂ ವಿಷಯ ಮುಟ್ಟಿಸಿದ್ದು, ಮದುವೆಗೆ ಮಲೈಕೆ ‘ಓಕೆ’ ಎಂದಿದ್ದಾರೆ ಎನ್ನುವುದು ತಾಜಾ ಸುದ್ದಿ. ಅದನ್ನೇ ಇನ್ಸ್ಟಾದಲ್ಲಿ ಮಲೈಕೆ ಪರೋಕ್ಷವಾಗಿ ಹಂಚಿಕೊಂಡಿದ್ದಾರೆ ಎನ್ನುತ್ತಿದೆ ಬಿಟೌನ್.