ಮಂಡ್ಯ: ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು, ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malvalli) ತಾಲೂಕಿನ ಮುತ್ತತ್ತಿಗೆ ಭೇಟಿ ನೀಡಿ ಶ್ರೀ ಮುತ್ತತ್ತಿರಾಯನ ದರ್ಶನ ಪಡೆದರು.
Advertisement
ಗಂಧದ ಗುಡಿ ಚಿತ್ರ ಬಿಡುಗಡೆಯ ನಂತರ ರಾಜ್ಯದ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವ ಅಶ್ವಿನಿ ಅವರು, ಇಂದು ಬೆಳಗ್ಗೆ ಮುತ್ತತ್ತಿಗೆ ಆಗಮಿಸಿ ದೇವರ ದರ್ಶನ ಪಡೆದರು. ಮುತ್ತತ್ತಿಯ ಶ್ರೀ ಆಂಜನೇಯ ಸ್ವಾಮಿ ರಾಜ್‍ಕುಮಾರ್ ಕುಟುಂಬದ ಆರಾಧ್ಯ ದೈವವಾಗಿದ್ದು, ರಾಜಕುಮಾರ್ ಕಾಲದಿಂದಲೂ ಈ ಕುಟುಂಬ ಆಗಿದ್ದಾಗೆ ಮುತ್ತತಿಗೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಇದನ್ನೂ ಓದಿ: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ‘ಕಾಂತಾರ’ ಸಪ್ತಮಿ ಗೌಡ ನಾಯಕಿ
Advertisement
Advertisement
ಅದರಂತೆ ಇಂದು ಬೆಳಗ್ಗೆ ಮುತ್ತತ್ತಿಗೆ ಆಗಮಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಂಜನೇಯ ಸ್ವಾಮಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ದರ್ಶನ ಪಡೆದರು. ಇದಕ್ಕೂ ಮೊದಲು ಹಲಗೂರಿನಲ್ಲಿ ಬಾಬು ಅವರ ಷಡ್ ಹೋಟೆಲ್‍ಗೆ ಭೇಟಿ ನೀಡಿ ಚಿಬ್ಲು ಇಡ್ಲಿ ಸವಿದರು. ಅಶ್ವಿನಿ ಅವರ ಜೊತೆ ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ಯುವರಾಜ್ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ನಟಿಸಲು ರಿಷಬ್‌ಗೆ ಇಷ್ಟವಿಲ್ವಾ?