ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!

- ವಕೀಲ ಮತ್ತು ಆತನ ಸಹಚರರಿಂದ ಅತ್ಯಾಚಾರ, ಬೆದರಿಕೆ

Advertisements

ಲಕ್ನೋ: ಪತಿಯನ್ನು ಜಾಮೀನಿನ ಮೇರೆಗೆ ಬಿಡಿಸಲು ಹೋದ ಮಹಿಳೆಯನ್ನು ವಕೀಲ ಮತ್ತು ಆತನ ಆಪ್ತರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

Advertisements

ಮಹೇಶ್, ವಿಕಾಸ್ ಹಾಗೂ ದೇವೇಂದ್ರ ಅತ್ಯಾಚಾರವೆಸಗಿರುವ ಕಾಮುಕರು. ಈ ಬಗ್ಗೆ ಮಹಿಳೆಯು, ವಕೀಲರು ಸಹಾಯ ಮಾಡುವ ನೆಪದಲ್ಲಿ ನನ್ನನ್ನು ನೋಯ್ಡಾದಲ್ಲಿರುವ ಕಚೇರಿಗೆ ಕರೆಸಿಕೊಂಡರು. ಅಲ್ಲಿ ಅವನು ಮತ್ತು ಅವನ ಸಹಚರರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ವೀಡಿಯೋ ಕೂಡ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೊಬೈಲ್ ಕದ್ದಿದ್ದಕ್ಕೆ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಯುವಕರು

Advertisements

ಪ್ರಕರಣವೊಂದಕ್ಕೆ  ಸಂಬಂಧಿಸಿದಂತೆ  ಮಹಿಳೆಯ ಪತಿಯನ್ನು ನೋಯ್ಡಾ ಪೊಲೀಸರು ಕೇಸು ದಾಖಲಿಸಿಕೊಂಡು ಜೈಲಿಗಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪತಿಯನ್ನು ಜಾಮೀನಿನ ಮೇಲೆ ಹೊರತರಲು ಮಹಿಳೆ, ಆರೋಪಿಗಳ ಬಳಿ ಕಾನೂನು ಸಹಾಯವನ್ನು ಪಡೆಯುತ್ತಿದ್ದಳು.

ಹರಿಯಾಣದ ಬಲ್ಲಭಗಢ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ, ತನ್ನ ಪತಿ ಜೈಲಿನಲ್ಲಿದ್ದಾಗ ಜಾಮೀನು ಪಡೆಯಲು ವಕೀಲರನ್ನು ಹುಡುಕುತ್ತಿದ್ದೆ. ಈ ವೇಳೆ ವಿಕಾಸ್ ಎಂಬಾತನಿಂದ ಕರೆ ಬಂದಿದ್ದು, ತನ್ನ ಪತಿಗೆ ಜಾಮೀನು ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾನೆ. ನಂತರ ವಕೀಲ ಮಹೇಶ್ ಅವರನ್ನು ಭೇಟಿಯಾಗುವಂತೆ ಹೇಳಿದ್ದಾನೆ ಎಂದು ಮಹಿಳೆ ತಿಳೀಸಿರುವುದಾಗಿ ನೋಯ್ಡಾದ ಮಹಿಳಾ ಪೊಲೀಸ್ ಅಧಿಕಾರಿ ಅಂಕಿತಾ ಶರ್ಮಾ ತಿಳಿಸಿದ್ದಾರೆ.  ಇದನ್ನೂ ಓದಿ: ಲಸಿಕೆ ಬೇಡ ಎಂದು ಚಾಕು ಹಿಡಿದು ಮರ ಹತ್ತಿ ಕುಳಿತ!

Advertisements

Advertisements
Exit mobile version