-ಗೆದ್ದ ಹಾಕಿ ಆಟಗಾರ ಸಂದೀಪ್ ಸಿಂಗ್
ಚಂಡೀಗಢ: ಈ ಬಾರಿ ಬಿಜೆಪಿ ಹರ್ಯಾಣದಲ್ಲಿ ಮೂರು ಕ್ರೀಡಾಪಟುಗಳಿಗೆ ಬಿ ಫಾರಂ ನೀಡಿತ್ತು. ಕುಸ್ತಿಪಟುಗಳಾದ ಬಬಿತಾ ಪೋಗಾಟ್, ಯೋಗೇಶ್ವರ್ ದತ್ ಮತ್ತು ಹಾಕಿ ಆಟಗಾರ ಸಂದೀಪ್ ಸಿಂಗ್ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಬಬಿತಾ ಮತ್ತು ಯೋಗೇಶ್ವರ್ ಮೊದಲ ಚುನಾವಣೆಯಲ್ಲಿ ಸೋಲಿನ ರುಚಿ ನೀಡಿದರು. ಇತ್ತ ಸಂದೀಪ್ ಸಿಂಗ್ ಗೆದ್ದು ಜಯದ ನಗೆ ಬೀರಿದ್ದಾರೆ.
ಬದೌಡಾ ವಿಧಾನಸಭಾ ಕ್ಷೇತ್ರದಲ್ಲಿ ಯೋಗೇಶ್ವರ್ ದತ್ ಕಣದಲ್ಲಿದ್ದು, ಕಾಂಗ್ರೆಸ್‍ನ ಶ್ರೀಕೃಷ್ಣ ಹೂಡಾಗೆ ನೇರ ಪೈಪೋಟಿ ನೀಡಿದ್ದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತ ಬಂದ ಶ್ರೀಕೃಷ್ಣ ಗೆಲುವಿನ ಕೇಕೆ ಹಾಕಿದರು. 2014ರ ಚುನಾವಣೆಯಲ್ಲಿಯೂ ಶ್ರೀಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು.
Advertisement
Advertisement
ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಬಿಜೆಪಿಯಿಂದ ಪೆಹೊವಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆರಂಭದಿಂದಲೂ ಕಾಂಗ್ರೆಸ್ ನ ಮನ್ದೀಪ್ ಸಿಂಗ್ ಗೆ ಟಕ್ಕರ್ ನೀಡುತ್ತಾ ಬಂದಿದ್ದರು.
Advertisement
ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಬಬಿತಾ ಫೋಗಾಟ್ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಸೋಮ್‍ವೀರ್ ಸಂಗ್ವಾನ್ ವಿರುದ್ಧ ಬಬಿತಾ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋಮ್ ವೀರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಮಲ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.