ಚಂಡೀಗಢ: ರಾಜಧಾನಿ ಚಂಡೀಗಢ ವಿಚಾರವಾಗಿ ಈಗ ಹರ್ಯಾಣ ಮತ್ತು ಪಂಜಾಬ್ ಮಧ್ಯೆ ಗುದ್ದಾಟ ಆರಂಭವಾಗಿದೆ.
ಚಂಡೀಗಢವನ್ನು ಪಂಜಾಬ್‌ಗೆ ಹಸ್ತಾಂತರಿಸಬೇಕು ಎಂದು ನೂತನ ಆಪ್ ಸರ್ಕಾರ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿದ ಬೆನ್ನಲ್ಲೇ ಹರ್ಯಾಣ ಈಗ ಏ.5 ರಂದು ವಿಶೇಷ ಅಧಿವೇಶನವನ್ನು ಕರೆದಿದೆ.
Advertisement
ಪಂಜಾಬ್ ಸರ್ಕಾರದ ನಡೆಯನ್ನು ಖಂಡಿಸಿದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಆಪ್ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಹರ್ಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಪಂಜಾಬ್‌ನಲ್ಲಿ ಆಪ್ಎ ನೇತೃತ್ವದ ಸರ್ಕಾರವು ಮೊದಲು ಸಟ್ಲೇಜ್ -ಯಮುನಾ ಲಿಂಕ್ (ಎಸ್‌ವೈಎಲ್) ಕಾಲುವೆಯನ್ನು ನಿರ್ಮಿಸಬೇಕು ಎಂದಿದ್ದಾರೆ. ಇದನ್ನೂ ಓದಿ : ನಾನು ಯಾರ ಕಾಲಿಗೂ ಬಿದ್ದು, ಕೃಪೆ ತೋರಿ ಅಂತ ಕೇಳಿಕೊಂಡಿಲ್ಲ: ಎಂ.ಕೆ.ಸ್ಟಾಲಿನ್
Advertisement
Advertisement
ಅಷ್ಟೇ ಅಲ್ಲದೇ ಚಂಡೀಗಢವು ಹರ್ಯಾಣ ಮತ್ತು ಪಂಜಾಬ್‌ನ ರಾಜಧಾನಿಯಾಗಿ ಉಳಿಯುತ್ತದೆ ಮತ್ತು ಪಂಜಾಬ್‌ನ ಹಿಂದಿ ಮಾತನಾಡುವ ಪ್ರದೇಶಗಳನ್ನು ಹರ್ಯಾಣಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.
Advertisement
ಈಗ ಮುನ್ನೆಲೆಗೆ ಯಾಕೆ?
ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಇನ್ನು ಮುಂದೆ ಪಂಜಾಬ್ ಕಾನೂನುಗಳ ಬದಲಿಗೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು)ಯ ನಿಯಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಕಳೆದ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದ್ದರು. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು?
ಅಮಿತ್ ಶಾ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ವಿತ್ತ ಸಚಿವ ಹರ್ಪಾಲ್ ಸಿಂಗ್ ಸೇರಿದಂತೆ ಎಎಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಈ ನಿರ್ಧಾರ ಪಂಜಾಬ್ ಮರುಸಂಘಟನೆ ಕಾಯ್ದೆಗೆ ವಿರುದ್ಧವಾಗಿದೆ. ಚಂಡೀಗಢದ ಮೇಲೆ ಪಂಜಾಬಿಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಮಾನ್ ಕಿಡಿಕಾರಿ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿ ಮಂಡಿಸಿ ಕೇಂದ್ರವನ್ನು ಆಗ್ರಹಿಸಿದ್ದರು.