ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ ಸದ್ಯದ ಕನ್ನಡದ ಬ್ಯುಸಿ ನಟಿ. ಬಹುಭಾಷಾ ಚಿತ್ರಗಳಲ್ಲಿ ಮಿಂಚ್ತಿರೋ ಪ್ರತಿಭೆ, ಇದೀಗ `ತಾಯ್ತ’ ಚಿತ್ರದ ಮೂಲಕ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣದ ಫೋಟೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
View this post on Instagram
ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಚಿತ್ರಗಳಲ್ಲಿ ಆಕ್ಟೀವ್ ಆಗಿರೋ ನಟಿ ಹರ್ಷಿಕಾ, ಇತ್ತೀಚೆಗೆ ಬೋಜಪುರಿ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ರು. ಈಗ ಕನ್ನಡದ `ತಾಯ್ತ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ವಿಭಿನ್ನ ಪಾತ್ರದ ಮೂಲಕ ರಂಜಿಸಲು ಸಜ್ಜಾಗಿದ್ದಾರೆ.
ಕನ್ನಡದ ಜನಪ್ರಿಯ ಹಾಸ್ಯನಟ ಸಾಧುಕೋಕಿಲ ಅವರ ಸಹೋದರ ಲಯಕೋಕಿಲ ನಿರ್ದೇಶನದಲ್ಲಿ `ತಾಯ್ತ’ ಚಿತ್ರ ಮೂಡಿ ಬಂದಿದೆ. ಪವರ್‌ಫುಲ್ ಪಾತ್ರದ ಜೊತೆ ಡಿಫರೆಂಟ್ ಶೇಡ್‌ನಲ್ಲಿ ಹರ್ಷಿಕಾ ಕಾಣಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೋ ಶೇರ್ ಮಾಡಿದ್ದು ಸದ್ಯ ಈ ಫೋಟೋ ವೈರಲ್ ಆಗ್ತಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಇದನ್ನು ಓದಿ:ಮೋಸ್ಟ್ ಬ್ಯಾಚುಲರ್ ಹುಡುಗಿ ನಿಧಿ ಅಗರ್ವಾಲ್ ಕಾಂಡೋಮ್ ಕಂಟಕ



