ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಹರ್ಷಿಕಾ ಪೂಣಚ್ಚ (Harshika Poonacha) ವಿನೂತನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್‌ನಲ್ಲಿ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.
ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ತಾರಾದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ವಿನೂತನ ಶೈಲಿಯಲ್ಲಿ ಬೇಬಿಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಅವರು ಹಂಚಿಕೊಂಡ ರೀಲ್ಸ್‌ನಲ್ಲಿ ಕಲಾತ್ಮಕ ಶೈಲಿ ಕಂಡುಬರುತ್ತಿದೆ. ಇದನ್ನೂ ಓದಿ: ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎ ಸರ್ಟಿಫಿಕೇಟ್
ಡಾ. ರಾಜ್‌ಕುಮಾರ್, ಆರತಿ ಜೋಡಿಯ ಕಸ್ತೂರಿ ನಿವಾಸ ಚಿತ್ರದ `ನೀ ಬಂದು ನಿಂತಾಗ’ ಹಾಡಿಗೆ ಮಾಡಿರುವ ಕೊಡಗಿನ ಬೆಡಗಿಯ ರೀಲ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಿರ್ದೇಶಕನ ಜೊತೆ ಹಸೆಮಣೆ ಏರಿದ ಖ್ಯಾತ ನಟಿ ಸ್ವಾತಿ ರೆಡ್ಡಿ
