ಪಬ್ಲಿಕ್ ಟಿವಿ (PUBLIC TV) ಪ್ರಸ್ತುತ ವಿದ್ಯಾಪೀಠ (Vidhyapeeta) 7ನೇ ಆವೃತ್ತಿಯ ಎಜುಕೇಶನ್ ಎಕ್ಸ್‌ಪೋಗೆ (Education Expo) ಇಂದು (ಏ.28) ಕೊನೆಯ ದಿನವಾಗಿದ್ದು, ಯಶಸ್ವಿಯಾಗಿ ತೆರೆಬಿದ್ದಿದೆ. ಈ ಕಾರ್ಯಕ್ರಮಕ್ಕೆ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಪ್ರದೀಪ್ ದೊಡ್ಡಯ್ಯ ಸಾಥ್ ನೀಡಿದ್ದಾರೆ.
ಪಬ್ಲಿಕ್ ಟಿವಿ ಎಜುಕೇಶನ್ ಎಕ್ಸ್‌ಪೋದಲ್ಲಿ ಭಾಗಿಯಾಗಿ ಲಕ್ಕಿ ಡಿಪ್ ಮೂಲಕ ಪ್ರಶಸ್ತಿ ಗೆದ್ದ ವಿದ್ಯಾರ್ಥಿಗಳಿಗೆ ಹರ್ಷಿಕಾ ಮತ್ತು ಪ್ರದೀಪ್ ಬಹುಮಾನ ವಿತರಣೆ ಮಾಡಿದ್ದಾರೆ. ಬಳಿಕ ಎಕ್ಸ್‌ಪೋ ಬಗ್ಗೆ ಮಾತನಾಡಿ, ಬಹಳ ಅದ್ಭುತವಾದ ವೇದಿಕೆ ನಾವು ಕಾಲೇಜಿನಲ್ಲಿ ಓದುವಾಗ ಈ ರೀತಿಯ ಅವಕಾಶಗಳಿರಲಿಲ್ಲ. ಇದ್ದಿದ್ದರೆ ನಮಗೂ ಸಹ ಮುಂದೆ ಹೋಗೋಕೆ ಅವಕಾಶ ಆಗುತ್ತಿತ್ತು ಎಂದು ಹರ್ಷಿಕಾ ಮಾತನಾಡಿದ್ದಾರೆ.
ಈ ರೀತಿ ಒಂದೇ ಸೂರಿನಲ್ಲಿ ಹಲವಾರು ಕಾಲೇಜುಗಳನ್ನ ಸೇರಿಸಿ ಅದ್ಭುತ ಕಾರ್ಯಕ್ರಮ ಮಾಡುತ್ತಿರುವ ಪಬ್ಲಿಕ್ ಟಿವಿಗೆ ಅಭಿನಂದನೆಗಳು ಎಂದು ನಟಿ ಹರ್ಷಿಕಾ ಪೂಣಚ್ಚ ಮಾತನಾಡಿದ್ದಾರೆ. ಇದನ್ನೂ ಓದಿ:ಪರಭಾಷೆಯಲ್ಲಿ ಕನ್ನಡತಿ ರುಕ್ಮಿಣಿ ವಸಂತ್‌ಗೆ ಭಾರೀ ಬೇಡಿಕೆ
ಅಂದಹಾಗೆ, ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.