ಸ್ಯಾಂಡಲ್‌ವುಡ್ ಬ್ಯೂಟಿ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ (Bhuvan) ಇಂದು (ಆಗಸ್ಟ್ 24) ಕೊಡವ ಸಂಪ್ರದಾಯದಂತೆ ದಾಂಪತ್ಯ(Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಜ್‌ಪೇಟೆಯ ಅಮ್ಮಾತ್ತಿ ಕೊಡವ ಸಮಾಜದಲ್ಲಿ ಮದುವೆ ಅದ್ದೂರಿಯಾಗಿ ಜರುಗಿದೆ. ಆಗಸ್ಟ್ 23-24ರಂದು ಎರಡು ದಿನ ಕೊಡವ ಶೈಲಿಯಂತೆ ವಿವಾಹ ನಡೆದಿದೆ. ಅಷಕ್ಕೂ ಕೊಡವ ಶೈಲಿಯ ಮದುವೆ ಹೇಗಿರುತ್ತೆ? ಈ ಬಗ್ಗೆ ಇಲ್ಲಿದೆ ಮಾಹಿತಿ.
ಕೊಡವ ಸಂಪ್ರದಾಯ ಮದುವೆ ಕೊಂಚ ವಿಭಿನ್ನ. ಕೊಡಗಿನ ಮದುವೆ ದಿನದ ವಧು-ವರನ ಉಡುಗೆ, ಡ್ಯಾನ್ಸ್, ಮದುವೆ ಊಟದ ಮೆನು ಎಲ್ಲವೂ ಸ್ಪೆಷಲ್ ಆಗಿರುತ್ತದೆ. ಎರಡು ದಿನ ಈ ಅದ್ದೂರಿ ಮದುವೆಯಲ್ಲಿ, ಮೊದಲ ದಿನ ಊರ್ಕುಡುವ ಶಾಸ್ತ್ರವಿರುತ್ತದೆ. ಈ ದಿನವೇ ಹರ್ಷಿಕಾಗೆ ತಾಯಿಯಿಂದ ಮಾಂಗಲ್ಯದಾರಣೆ ಆಗಿದೆ. ನಂತರ ಹುಡುಗ-ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹೆಂದಿ ಶಾಸ್ತ್ರ ಜರುಗಲಿದೆ. ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ
Advertisement
Advertisement
ಎರಡನೇ ದಿನ ಬೆಳಿಗ್ಗೆ ಹರ್ಷಿಕಾಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಬಳಿಕ ಪೊಂಬಣ ಪೂಜೆ ಮಾಡಿಸಲಾಗುತ್ತದೆ. ಅದು ವರ ಪೂಜೆ ರೀತಿಯಲ್ಲಿರುತ್ತದೆ. ಇತ್ತ ಮದುವೆ ಹುಡುಗ ಬಾಳೆ ಕಡೆದು ಮಂಟಪಕ್ಕೆ ಬರುತ್ತಾರೆ. ಈ ಶಾಸ್ತ್ರ ಭುವನ್ ನೆರವೇರಿಸಿ ಮಂಟಪಕ್ಕೆ ಬಂದಿದ್ದಾರೆ. ಭುವನ್ ನನ್ನು ಹುಡುಗಿ ಮನೆಯವರು ಕರೆದುಕೊಂಡು ಹೋಗ್ತಾರೆ. ಹರ್ಷಿಕಾ ಅಮ್ಮ ಹುಡುಗನಿಗೆ ಹಾಲು, ಬಾಳೆಹಣ್ಣು ತಿನ್ನಿಸಿದ್ದಾರೆ. ನಂತರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡಿದ್ದಾರೆ. ಬಂದ ಅತಿಥಿಗಳು ಹುಡುಗ ಹುಡುಗಿಗೆ ಅಕ್ಕಿಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಡುತ್ತಾರೆ. ಕೊನೆಯಲ್ಲಿ ಹುಡುಗ- ಹುಡುಗಿ ಕೈ ಹಿಡಿದು ಎಬ್ಬಿಸ್ತಾನೆ. ಅದರಂತೆ ಹರ್ಷಿಕಾ ಕೈ ಹಿಡಿದು ಭುವನ್ ಎಬ್ಬಿಸಿದ್ದಾರೆ.
Advertisement
Advertisement
ಇಂದು (ಆಗಸ್ಟ್ 24) ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಬಿಎಸ್ ವೈ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದರು.
ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.
ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.
ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.