ಸ್ಯಾಂಡಲ್‌ವುಡ್ ಹರ್ಷಿಕಾ-ಭುವನ್ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು (ಆಗಸ್ಟ್) 24ರಂದು ಕೊಡಗಿನ ವಿರಾಜ್‌ಪೇಟೆಯಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿದೆ.
12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ ಜೋಡಿ.
ಗುರುಹಿರಿಯರ ಸಮ್ಮುಖದಲ್ಲಿ ಕೊಡವ ಪದ್ಧತಿಯಂತೆ ಹೊಸ ಬಾಳಿಗೆ ಹರ್ಷಿಕಾ-ಭುವನ್ (Bhuvan Ponnanna) ಜೋಡಿ ಕಾಲಿಟ್ಟಿದ್ದಾರೆ.
ಆಗಸ್ಟ್ 23ರಂದು ಬುಧವಾರ ಕೊಡಗಿನಲ್ಲಿ ಊರ್ಕುಡುವ ಶಾಸ್ತ್ರ ನಡೆದಿದೆ. ಆಗಸ್ಟ್ 24ರಂದು ಹರ್ಷಿಕಾ ಜೋಡಿಯ ಮದುವೆ (Wedding) ಅದ್ದೂರಿಯಾಗಿ ಜರುಗಿದೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್
ಭುವನ್ ಬಿಳಿ ಬಣ್ಣ ಉಡುಗೆಯಲ್ಲಿ ಮಿಂಚಿದ್ರೆ, ನಟಿ ಹರ್ಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಕೊಡವ ಗೆಟಪ್‌ನಲ್ಲಿ ನವಜೋಡಿ ಹೈಲೆಟ್ ಆಗಿದ್ದಾರೆ.
ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ.
ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.
ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.
ಹರ್ಷಿಕಾ-ಭುವನ್ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ಪೂಜಾ ಗಾಂಧಿ(Pooja Gandhi), ಬಿಎಸ್‌ವೈ, ಮುರುಗೇಶ್ ನಿರಾಣಿ, ದೊಡ್ಡಣ್ಣ, ಸುಧಾಕರ್, ಅನುಪ್ರಭಾಕರ್ ದಂಪತಿ, ತಬಲಾ ನಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದರು.
ಚಂದನವನದ ನವ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ವಿಶ್ ಮಾಡ್ತಿದ್ದಾರೆ.
‘ಪಿಯುಸಿ’ (Puc) ಸಿನಿಮಾ ಮೂಲಕ ನಟಿ ಹರ್ಷಿಕಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಜಾಕಿ, ತಮಸ್ಸು, ಕಾಸಿನ ಸರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕೊಂಕಣಿ, ತುಳು ಸೇರಿದಂತೆ 8 ಭಾಷೆಗಳಲ್ಲಿ ನಾಯಕಿಯಾಗಿ ಹರ್ಷಿಕಾ ಗಮನ ಸೆಳೆದಿದ್ದಾರೆ.
ಭುವನ್ ಪೊನ್ನಣ್ಣ ಅವರು ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ, ರಾಂಧವ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯ ಸುಂದರ ಫೋಟೋಗಳು ದೀಪಕ್ ವಿಜಯ್ (Deepak Vijay Photography) ಕ್ಯಾಮೆರಾ ಕಣ್ಣಲ್ಲಿ ಮೂಡಿ ಬಂದಿದೆ.