ನಾಳೆ ಹರ್ಷಿಕಾ-ಭುವನ್ ಮದುವೆ: ಅನೇಕ ತಾರೆಯರು ಭಾಗಿ

Public TV
2 Min Read
Harshika Poonacha Bhuvan Ponnanna 2

ನ್ನಡ ಸಿನಿಮಾ ರಂಗದ ಹೆಸರಾಂತ ತಾರೆ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ನಟ ಭುವನ್ (Bhuvan) ನಾಳೆ ಬೆಳಗ್ಗೆ 10.30ಕ್ಕೆ ಕೊಡಗಿನ (Kodagu) ಅಮ್ಮತ್ತಿ ಕೊಡವ ಸಮಾಜದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆ ಊರ್ಕುಡುವ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿದೆ. ಇಂದು ಮತ್ತು ನಾಳೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಭಾಗಿಯಾಗಲಿದ್ದಾರೆ. ಕೊಡವ ಪದ್ಧತಿಯಂತೆಯೇ ಈ ಮದುವೆ ನಡೆಯಲಿದೆ.

Harshika Poonacha Bhuvan 1

ಹರ್ಷಿಕಾ-ಭುವನ್ 12 ವರ್ಷಗಳ ಪ್ರೀತಿಗೆ ಮದುವೆಯ  (marriage)ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಭರ್ಜರಿಯಾಗಿ ಮದುವೆ ತಯಾರಿ ಹರ್ಷಿಕಾ ಮನೆಯಲ್ಲಿ ನಡೆಯುತ್ತಿದೆ. ಈ ಕುರಿತ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

harshika poonacha 3

ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

harshika poonacha 5

ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಹೇಳಿದ್ದಾರೆ.

 

ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ. ಮುಂದಿನ ನಮ್ಮಿಬ್ಬರ ಕೊಡವ ಶೈಲಿಯಲ್ಲಿ ಮದುವೆ ಎಂದು ಖುಷಿಯಿಂದ ಭುವನ್ ಮಾತನಾಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article