ಪುಣೆ: ರಾಜಸ್ಥಾನ ರಾಯಲ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯದ ಬಳಿಕ ರಾಜಸ್ಥಾನ ತಂಡದ ಆಲ್‍ರೌಂಡರ್ ರಿಯಾನ್ ಪರಾಗ್‍ಗೆ ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ಶೇಕ್ ಹ್ಯಾಂಡ್ ಮಾಡದೆ ಕ್ರೀಡಾ ಸ್ಫೂರ್ತಿ ಮರೆತ ಪ್ರಸಂಗ ನಡೆದಿದೆ.
ನಿನ್ನೆ ನಡೆದ ಆರ್ಸಿಬಿ ಮತ್ತು ರಾಜಸ್ಥಾನ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ ತಂಡಕ್ಕೆ ಆಲ್‍ರೌಂಡರ್ ರಿಯಾನ್ ಪರಾಗ್ ನೆರವಾದರು. ತಂಡದ ರನ್ ಹಿಗ್ಗಿಸಲು ಕೊನೆಯ ಓವರ್‌ನಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಪರಾಗ್, ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್‌ನಲ್ಲಿ 1 ಫೋರ್ ಮತ್ತು 2 ಸಿಕ್ಸ್ ಚಚ್ಚಿದರು. ಇದರಿಂದ ಕೋಪಗೊಂಡ ಹರ್ಷಲ್ ಪಟೇಲ್ ಡಗೌಟ್ ಕಡೆಗೆ ಸಾಗುತ್ತಿದ್ದ ಪರಾಗ್‍ರನ್ನು ಕೆಣಕಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ಕೊನೆಯಲ್ಲಿ ಪರಾಗ್ ಸ್ಫೋಟಕ ಆಟ – ಆರ್‌ಆರ್‌ಗೆ 29 ರನ್‍ಗಳ ಜಯ, ಮತ್ತೆ ಕೊಹ್ಲಿ ವಿಫಲ
ಆ ಬಳಿಕ ಹಿರಿಯ ಆಟಗಾರರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು. ಆ ನಂತರ ರಾಜಸ್ಥಾನ ತಂಡ ಆರ್ಸಿಬಿ ವಿರುದ್ಧ ಗೆದ್ದ ಬಳಿಕ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಪರಾಗ್, ಹರ್ಷಲ್ ಪಟೇಲ್‍ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಾಗ ಪಟೇಲ್ ನಿರಾಕರಿಸಿ ಕಿರಿಯ ಆಟಗಾರನ ಮುಂದೆ ಕ್ರೀಡಾ ಸ್ಫೂರ್ತಿ ಮರೆತರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹರ್ಷಲ್ ಪಟೇಲ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್
One Young Talent Jealous Of Other.
Very #Unsportive Behaviour From Harshal Patel. Keep Going Riyan Parag @rajasthanroyals @RCBTweets @IPL pic.twitter.com/Sg0Pv2pfSC
— Jayakrishna JK (@ImJK_117) April 27, 2022
ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್ಸಿಬಿ ತಂಡ ರಾಜಸ್ಥಾನ ನೀಡಿದ 145 ರನ್‍ಗಳ ಅಲ್ಪಮೊತ್ತವನ್ನು ಚೇಸ್ ಮಾಡಲಾಗದೇ 29 ರನ್‍ಗಳ ಅಂತರದಿಂದ ಸೋಲು ಕಂಡಿತು. ಇತ್ತ ರಾಜಸ್ಥಾನ ತಂಡ ಆರ್ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.