ಬೆಂಗಳೂರು: ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬೇಗ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮನವಿ ಸಲ್ಲಿಸಿದ್ದಾರೆ.
Advertisement
ಗೃಹ ಸಚಿವರ ನಿವಾಸಕ್ಕೆ ಭೇಟಿ ನೀಡಿದ ಮುತಾಲಿಕ್, ಹರ್ಷ ಕೊಲೆ ಪ್ರಕರಣ ಸಂಬಂಧ ತ್ವರಿತ ಗತಿಯಲ್ಲಿ ತನಿಖೆ ನಡೆಸಬೇಕು. ಪ್ರಕರಣ ಸಂಬಂಧ ಕೋಕಾ ಕಾಯ್ದೆ ಮೂಲಕ ಅಪರಾಧಿಗಳನ್ನು ಹೊರ ಬಿಡಬಾರದು. ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದ ಮೂಲಕ ವಿಚಾರಣೆ ಆಗಬೇಕೆಂದು ಮನವಿ ಸಲ್ಲಿಸಿದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ
Advertisement
Advertisement
ಗೃಹಸಚಿವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಘಟನೆ ಹಿನ್ನೆಲೆ 24 ಗಂಟೆಗಳಲ್ಲಿ ಕೊಲೆಗಡುಕರನ್ನು ಬಂಧನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಕೊಲೆ ಮಾಡಿದವರನ್ನು ಎನ್‍ಕೌಂಟರ್ ಮಾಡಲು ಬೇಡಿಕೆಯಿಟ್ಟಿದ್ದೇವೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆ ತ್ವರಿತಗತಿಯಲ್ಲಿ ನೀಡಬೇಕು. ಕೋಕಾ ಸೆಕ್ಷನ್ ಹಾಕಲು ಮನವಿ ಮಾಡಲಾಗಿದೆ. ವಿಶೇಷ ನ್ಯಾಯಾಲಯ ರಚಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ನಮ್ಮ ಮನವಿ ಬಗ್ಗೆ ನಾಳೆ ತೀರ್ಮಾನ ಮಾಡೋದಾಗಿ ಗೃಹಸಚಿವರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್
Advertisement