ಉಡುಪಿ: ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ನೋಡಿದ್ದೀರಿ ಶೀಘ್ರ ಪಿಚ್ಚರ್ ತೋರಿಸ್ತೇವೆ ಎಂದು ಉಡುಪಿಯಲ್ಲಿ ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ನೇರ ಎಚ್ಚರಿಕೆ ನೀಡಿದ್ದಾರೆ.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯಲ್ಲಿ ಖಂಡನಾ ಪ್ರತಿಭಟನೆ ನಡೆಯಿತು. ಭಜರಂಗದಳ – ವಿಶ್ವ ಹಿಂದೂಪರಿಷತ್, ಹಿಂದು ಜಾಗರಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುನೀಲ್ ಕೆ.ಆರ್, ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ತೋರಿಸಿದ್ದೇವೆ. ಪಿಚ್ಚರ್ ಅಭಿ ಬಾಕಿ ಹೇ. ಕೊಲೆಗಟುಕರಿಗೆ ಮುಂದಿನ ದಿನಗಳಲ್ಲಿ ಪೂರ್ಣ ಚಿತ್ರ ತೋರಿಸುತ್ತೇವೆ. ಗಲ್ಲಿ ಗಲ್ಲಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಡಲು ನಮಗೆ ಗೊತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ
ಹೋರಾಟ ಮಾಡಲು ನಮಗೆ ತಲವಾರು ಮಾರಕಾಸ್ತ್ರ ಬೇಡ. ಜೈಲಿನಲ್ಲಿ ಒಂದು ಚಮಚ ಇದ್ದರೂ ಸಾಕು. ಚಮಚದಲ್ಲಿ ನಮಗೆ ಪ್ರತೀಕಾರ ತೀರಿಸಿ ಅನುಭವ ಇದೆ. ಸರ್ಕರಕ್ಕೆ ಹಿಂದೂ ಕಾರ್ಯಕರ್ತರ ಮೇಲೆ ಪ್ರೀತಿ ಅಭಿಮಾನ ಇದ್ದರೆ, ಹರ್ಷ ಕೊಲೆ ಆರೋಪಿಗಳನ್ನು ಶೂಟೌಟ್ ಮಾಡಿ. ಕೊಲೆ ಆರೋಪಿಗಳನ್ನು ಕೂಡಲೇ ನೇಣಿಗೇರಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್
ಗಲ್ಲಿ ಗಲ್ಲಿಯಲ್ಲಿ ಭಜರಂಗಿಗಳು ಕಾರ್ಯಾಚರಣೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಪಿಎಫ್‍ಐ, ಎಸ್‍ಡಿಪಿಐಗೆ ಸೂಕ್ತ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮಗೆ ಗೊತ್ತಿದೆ ಎಂದು ಸುನೀಲ್ ಕೆ.ಆರ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು