ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 9 ಎಫ್ಐಆರ್ ದಾಖಲು ಮಾಡಲಾಗಿದೆ.
Advertisement
ಎಸ್ಪಿ ಲಕ್ಷ್ಮೀ ಪ್ರಸಾದ್ ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಜಂಟಿ ಸುದ್ದಿಗೋಷ್ಠಿ ನಡೆಸಿ ಹರ್ಷ ಕೊಲೆ ಸಂಬಂಧ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಶಿವಮೊಗ್ಗ ನಗರದಲ್ಲಿ ಶುಕ್ರವಾರದ ವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್
Advertisement
Advertisement
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಲಕ್ಷ್ಮೀ ಪ್ರಸಾದ್, ಹಿಂಸಾಚಾರದ ಬಗ್ಗೆ 9 ಎಫ್ಐಆರ್ ದಾಖಲಾಗಿವೆ. 18 ವಾಹನಗಳು ಜಖಂ ಆಗಿವೆ ಈ ಬಗ್ಗೆ ಆರು ಮಂದಿ ದೂರು ನೀಡಿದ್ದಾರೆ. ಈಗಾಗಲೇ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಪಟ್ಟಿಯಲ್ಲಿ ಎ1-ಕಾಸೀಫ್, ಎ2-ನದೀಮ್, ಎ3-ಆಸೀಫ್ ಖಾನ್ ಅಲಿಯಾಸ್ ಚಿಕ್ಕೂ, ಎ4-ರಿಯಾನ್ ಷರೀಪ್ ಖಾಸೀ, ಎ5- ನಿಹಾನ್ ಮುಜಾಹೀದ್, ಎ6- ಅಬ್ದುಲ್ ಆಫಾನ್, ಎ7- ಜಿಲಾನಿ ಬಂಧಿತರೆಲ್ಲರು ಶಿವಮೊಗ್ಗದವರು. ಬಂಧಿತರಲ್ಲಿ ಎ-1 ಮತ್ತು ಎ-2 ಆರೋಪಿಗಳು 2016-17ರಲ್ಲಿ ನಡೆದ ಎರಡು ಕೇಸ್ಗಳಲ್ಲಿ ಆರೋಪಿಗಳಾಗಿದ್ದರು. ಎ1 ಮತ್ತು ಎ2 ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿ, ಕಸ್ಟಡಿಗೆ ಕೇಳಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್ಡಿಪಿಐ
Advertisement
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಹರ್ಷ ಕೊಲೆಯಿಂದ ಶಿವಮೊಗ್ಗದಲ್ಲಿ ಸಂಘರ್ಷ ನಡೆದಿದೆ. ಘಟನೆಯಲ್ಲಿ 18 ವಾಹನಗಳು ಜಖಂ ಆಗಿದೆ. ಆಸ್ತಿಪಾಸ್ತಿ ಹಾನಿ ಬಗ್ಗೆ 6 ಮಂದಿ ದೂರು ನೀಡಿದ್ದಾರೆ. 2 ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಕೇಳಲಾಗಿದೆ. ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ಕರ್ಫ್ಯೂ ನಿಯಮ ಜಾರಿಯಲ್ಲಿರಲಿದೆ. ಬೆಳಗ್ಗೆ 9 ಗಂಟೆಯ ತನಕ ಅತ್ಯಗತ್ಯ ವಸ್ತುಗಳ ಮಾರಾಟಕ್ಕಾಗಿ ಅವಕಾಶವಿದೆ. ಶುಕ್ರವಾರದವೆರಗೂ ಶಾಲಾ-ಕಾಲೇಜುಗಳು ರಜೆ ನೀಡಲಾಗಿದೆ ಎಂದರು.