– ಪೊಲಿಸರಿಗೆ ಎಸ್‍ಡಿಪಿಐ ಸವಾಲು
ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪರಿಗೂ, ಸುಪಾರಿ ಕೊಟ್ಟವರಿಗೂ ಏನೋ ಸಂಬಂಧ ಇದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟವರಿಗೆ ಹಾಗೂ ಈಶ್ವರಪ್ಪಗೂ ಏನೋ ಸಂಬಂಧ ಇದೆ. ಮೊದಲು ಅದರ ಬಗ್ಗೆ ತನಿಖೆ ಮಾಡಲಿ. ಈಶ್ವರಪ್ಪನವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ ಸತ್ಯ ಹೊರಗಡೆ ಬರುತ್ತೆ. ಸಂಘ ಪರಿವಾರದವರು ಈವರೆಗೆ 36 ಕೊಲೆ ಮಾಡಿದ್ದಾರೆ. 13 ಜನ ಹಿಂದೂ ಯುವಕರ ಕೊಲೆಯಲ್ಲಿ ಸಂಘ ಪರಿವಾರದ ಪಾತ್ರ ಇದೆ ಎಂದು ಆರೋಪ ಮಾಡಿದರು.
Advertisement
Advertisement
ಶಿವಮೊಗ್ಗ ಯುವಕನ ಕೊಲೆ ಪ್ರಕರಣದ ನಂತರ ಆದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ ದೇಶದಲ್ಲಿ ಕೊಲೆ ಪ್ರಕರಣಗಳು ಹೊಸದೇನಲ್ಲ. ಮಾಧ್ಯಮದ ವರದಿಯ ಪ್ರಕಾರ ಈ ಹತ್ಯೆಯಾದ ವ್ಯಕ್ತಿ ರೌಡಿಶೀಟರ್ ಅಂತಾ ಗೊತ್ತಾಗಿದೆ. ಈ ಕೊಲೆ ನಡೆದ ಸರ್ಕಾರದ ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರ ಮಾತುಗಳು ಖಂಡನೀಯ. ಕೊಲೆ ನಡೆದ ತಕ್ಷಣ ಪೊಲೀಸರ ತನಿಖೆ ಆರಂಭವಾಗುವ ಮುನ್ನ ಸಚಿವ ಈಶ್ವರಪ್ಪ, ರಾಘವೇಂದ್ರ, ಪ್ರತಾಪ್ ಸಿಂಹ ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ
Advertisement
Advertisement
ಇವರ ಪ್ರಚೋದನಾಕಾರಿ ಹೇಳಿಕೆಯಿಂದ ಮುಸ್ಲಿಂ ಮನೆಯ ಮೇಲೆ, ಅಂಗಡಿಯ ಮೇಲೆ, ವಾಹನದ ಮೇಲೆ ಬೆಂಕಿ ಹಚ್ಚಲಾಗಿದೆ. 143 ಸೆಕ್ಷನ್ ಇದ್ರೂ ಮೆರವಣಿಗೆ ಮಾಡಿದ್ರು. ಪೊಲೀಸರ ಕಣ್ಣಮುಂದೆಯೇ ಈಶ್ವರಪ್ಪ ಕಡೆಯ ಐನೂರು ಜನ ಹುಡುಗರು ದಾಂಧಲೆ ಮಾಡ್ತಾರೆ. ಕಫ್ರ್ಯೂ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿರೋದು ಈಶ್ವರಪ್ಪ, ಈಶ್ವರಪ್ಪ – ಎ1, ರಾಘವೇಂದ್ರ, ಗೃಹಸಚಿವರು ಇವರೆಲ್ಲ ನೇರ ಹೊಣೆ. ಎರಡು ದಿನದ ಮುಂಚೆ ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗಿತ್ತು ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ
ಪೊಲೀಸ್ ಇಲಾಖೆಯನ್ನು ವಿಸರ್ಜನೆ ಮಾಡಿ. ನೇರವಾಗಿ ಇವರ ದಾಂಧಲೆ ಮಾಡಿದ್ರೆ ಪೊಲೀಸರು ಯಾಕೆ ಬೇಕು. ನರಗುಂದದ ಮೇಲೆ ಮುಸ್ಲಿಂ ಯುವಕನ ಮೇಲೆ ಹಲ್ಲೆಯಾಗಿದೆ. ಸಮೀರ್ ಸಾವನ್ನಪ್ಪಿದ. ನಾಲ್ಕು ಜನ ಸಂಘಪರಿವಾರವದವರು ಜೈಲಿನಲ್ಲಿ ಇದ್ದಾರೆ. ಆದರೆ ರಾಜ್ಯದ ಮುಸ್ಲಿಮರು ಗಲಾಟೆ ಮಾಡಲಿಲ್ಲ. ಯಾರ ಮನೆಗೂ ಕಲ್ಲು ಎಸೆಯಲಿಲ್ಲ. ಈ ನಾಯಕರು ಮುಸ್ಲಿಂ ಯುವಕರ ಸಾವಿಗೆ ಸಂತಾಪ ಸೂಚಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ತಾ ಮುಂದು ನಾ ಮುಂದು ಅಂತಾ ಹರ್ಷ ಸಾವಿಗೆ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಇದೇ ಕರುಣೆ ಸಂಘ ಪರಿವಾರದವರು ಗದಗ ನರಗುಂದದಲ್ಲಿ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದಾಗ ಯಾಕೆ ಮಾತಾನಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧ್ವಜ ಹಿಡಿದು ಹೋದವರನ್ನ ಕೊಂದವರು ಕಾಂಗ್ರೆಸ್‍ನವರು: ಸಿ.ಟಿ ರವಿ ಕಿಡಿ
ಮಿಸ್ಟರ್ ಪ್ರತಾಪ್ ಸಿಂಹ ನಾಲಿಗೆ ಬಿಗಿ ಹಿಡಿದು ಮಾತಾನಾಡಿ. ಕರ್ನಾಟಕದಲ್ಲಿ ಏನೇ ಆದ್ರೂ ಈ ಪ್ರತಾಪ್ ಸಿಂಹ, ನಳಿನ್ ಎಸ್‍ಡಿಪಿಐ ಮೇಲೆ ಎತ್ತಾಕಿ ಬಿಡ್ತಾರೆ. ನೀವೊಬ್ಬ ಜವಾಬ್ದಾರಿ ಸಂಸದಾರ..!? ಸಂಘಪರಿವಾರವದವರು ಕೊಲೆ ಮಾಡಿದ್ರಲ್ಲ, ಆಗ ಭಜರಂಗದಳ, ಶ್ರೀರಾಮ ಸೇನೆ, ಆರ್‍ಎಸ್‍ಎಸ್ ನಿಷೇಧಕ್ಕೆ ಒತ್ತಾಯ ಮಾಡಿಲ್ಲ. ಯಾಕೆ ಈ ದ್ವಿಮುಖ ನೀತಿ. ನಿಮಗೆ ಕೊಡಗಿನಲ್ಲಿ ಹಿಂದೂ ಯುವಕ ಕಾರ್ತಿಕ್ ಮೇಲೆ ಕೇಸರಿ ಶಾಲು ಹಾಕಿಲ್ಲ ಅಂತಾ ಹಿಂದೂ ಯುವಕರೇ ಚಾಕು ಹಾಕಿದ್ರು. ಆಗ ಯಾಕೇ ಇವರು ಮಾತಾನಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ – ಈಶ್ವರಪ್ಪ ಹೇಳಿಕೆಗೆ ಜೆ.ಪಿ ನಡ್ಡಾ ಛೀಮಾರಿ
ನೀವು ಎಸ್‍ಡಿಪಿಐಗೆ ಪಾಠ ಮಾಡಬೇಕಾಗಿಲ್ಲ. ನಾವು ಪ್ರಬುದ್ಧ ರಾಜಕಾರಣದ ಮೇಲೆ ನಂಬಿಕೆ ಇಟ್ಟವರು. ಕ್ಷುಲ್ಲಕ ಕಾರಣಕ್ಕೆ ರಾಜಕಾರಣ ಮಾಡಲ್ಲ. ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣಕ್ಕೆ ಈಶ್ವರಪ್ಪ, ರಾಘವೇಂದ್ರ ಗೃಹಸಚಿವರು ಕಾರಣ. ಖಾಕಿ ಧರ್ಮಕ್ಕೆ ಪೊಲೀಸರು ಮರ್ಯಾದೆ ಕೊಟ್ರೆ ಇವರ ಮೇಲೆ ಕೇಸ್ ಹಾಕಿ ಎಂದು ಗರಂ ಆದರು. ಇದೇ ವೇಳೆ ಎಸ್‍ಡಿಪಿಐ ಬ್ಯಾನ್ ಗೆ ಒತ್ತಾಯ ಕೇಳಿಬರುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇದು ಅಲ್ಪಸಂಖ್ಯಾತ ವಿರೋಧಿ ನೀತಿ. ಇವರ ಷಡ್ಯಂತ್ರಗಳನ್ನು ನಾವು ಬಯಲಿಗೆ ಎಳೆಯುತ್ತೇವೆ. ನಾವು ಸೈದ್ಧಾಂತಿಕ ಹೋರಾಟ ಮಾಡುತ್ತಿದ್ದೇವೆ. ಇದಕ್ಕಾಗಿ ಬ್ಯಾನ್ ಮಾತು ಕೇಳಿಬರುತ್ತಿದೆ ಎಂದರು.
ಹಿಜಾಬ್‍ಗೂ ಈ ಕೊಲೆಗೂ ನೇರ ಲಿಂಕ್ ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲಾರೆ. ತನಿಖೆ ನಡೆಯುತ್ತಿದೆ, ನೈಜ್ಯ ಕಾರಣ ಬರಲಿ. ನಾಯಕರ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸೋದು ಅಲ್ಲ. ಹಿಜಬ್ ವಿಚಾರದಲ್ಲಿ ಸರ್ಕಾರ ವೈಫಲ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳೋಕೆ ಈ ರೀತಿಯ ಕೆಲಸ ಮಾಡಿರಬಹುದು. ಪೊಲೀಸರಿಗೆ ಫ್ರೀ ಹ್ಯಾಂಡ್ ಬಿಡಲಿ. ಮೊದಲು ಸಚಿವರು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೃತ ಹರ್ಷ ಕುಟುಂಬಕ್ಕೆ 6 ಲಕ್ಷ ರೂ. ಕೊಟ್ಟು ಬರುತ್ತೇನೆ: ರೇಣುಕಾಚಾರ್ಯ