ಬೀಜಿಂಗ್: ಚೀನಾದಲ್ಲಿ (China) ಕೋವಿಡ್ ಐಸೊಲೇಶನ್ ವಾರ್ಡ್‍ಗಳನ್ನು (Covid Isolation Ward) ಇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎರಡು ವರ್ಷಗಳ ಹಿಂದೆ ಜಗತ್ತನ್ನೇ ಭಯದ ವಾತಾವರಣದಲ್ಲಿಟ್ಟಿದ್ದ ಕೊರೊನಾ (Corona) ಇದೀಗ ಕಡಿಮೆ ಆಗಿ, ಜನರು ಮೊದಲಿನ ಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಚೀನಾದಲ್ಲಿ ಇನ್ನೂ ಕಠಿಣ ನಿಯಮಗಳಿದ್ದು, ಸೋಂಕಿತರು ಜೈಲಿನಂತಿರುವ ಕೋವಿಡ್ ಐಸೊಲೇಶನ್ ವಾರ್ಡ್‍ಗಳಲ್ಲಿ ಇರಬೇಕು.
Advertisement
If you are wondering if it’s a prison- no, it’s a COVID isolation ward in China! pic.twitter.com/3SSnCI4dfi
— Harsh Goenka (@hvgoenka) October 15, 2022
Advertisement
ಈ ವೀಡಿಯೋವನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ (Harsh Goenka) ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಜೈಲು ಅಲ್ಲ ಬದಲಿಗೆ ಇದು ಚೀನಾದಲ್ಲಿ ಕೋವಿಡ್ ಐಸೋಲೇಶನ್ ವಾರ್ಡ್ ಎಂದು ಟ್ವೀಟ್ ಮಾಡಿದ್ದಾರೆ.
Advertisement
ವೀಡಿಯೋದಲ್ಲಿ ಏನಿದೆ?: ಈ ವಾರ್ಡ್ ನೋಡಲು ಚಿಕ್ಕದಾದ ರೂಮ್ ರೀತಿಯಿದೆ. ಸೋಂಕಿತರನ್ನು ಅಲ್ಲೇ ಲಾಕ್ ಮಾಡಲಾಗಿದೆ. ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಜೈಲಿನ ರೀತಿಯಲ್ಲೇ ನೀಡಲಾಗುತ್ತಿದೆ. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ
Advertisement
ಈ ಟ್ವೀಟ್‍ನ್ನು ಮೂಲತಃ ವಾಲ್ ಸ್ಟ್ರೀಟ್ ಸಿಲ್ವರ್ ಎಂಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಚೀನಾದಲ್ಲಿ ಕೋವಿಡ್ ಐಸೊಲೇಶನ್‍ನಲ್ಲಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು ಸಹ ಇಲ್ಲೇ ಲಾಕ್ ಆಗಿರುತ್ತಾರೆ. ಈ ಟ್ವೀಟ್‍ಗೆ ನೆಟ್ಟಿಗರಿಂದ ವಿಭಿನ್ನ ರೀತಿಯ ಕಾಮೆಂಟ್‍ಗಳು ಬಂದಿವೆ. ಇದನ್ನೂ ಓದಿ: ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್