ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಹರ್ಮನ್‌ಪ್ರೀತ್ ಕೌರ್ ಅದ್ಭುತ ಕ್ಯಾಚ್ ಹಿಡಿದು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಅವರ ಕ್ಯಾಚನ್ನು ಬೌಂಡರಿ ಬಳಿ ಹಾರಿ ಹಿಡಿದಿದ್ದಾರೆ. ಜೂಲನ್ ಗೋಸ್ವಾಮಿ ಎಸೆದ 50ನೇ ಓವರಿನ ಕೊನೆಯ ಎಸೆತವನ್ನು 94 ರನ್(91 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಸ್ಟೆಫಾನಿ ಟೇಲರ್ ಸಿಕ್ಸ್ ಹೊಡೆಯುಲು ಲಾಂಗ್ ಆನ್ ಕಡೆ ಬಲವಾಗಿ ಹೊಡೆದಿದ್ದರು. ಈ ವೇಳೆ ಓಡಿಕೊಂಡು ಬಂದ ಹರ್ಮನ್‌ಪ್ರೀತ್ ಕೌರ್ ಹಾರಿ ಎಡಗೈಯಲ್ಲಿ ಹಿಡಿದು ಬೌಂಡರಿ ಗೆರೆಯ ಬಳಿ ಬಿದ್ದರು. ಕೆಳಗಡೆ ಬಿದ್ದರೂ ಬಾಲನ್ನು ಮಾತ್ರ ಕೈಯಿಂದ ಬಿಟ್ಟಿರಲಿಲ್ಲ. ಒಂದು ವೇಳೆ ಈ ಕ್ಯಾಚ್ ಹಿಡಿಯದೇ ಇದ್ದರೆ ಸಿಕ್ಸ್ ಹೊಡೆಯುವ ಮೂಲಕ ಸ್ಟೆಫಾನಿ ಟೇಲರ್ ಶತಕ ಹೊಡೆಯುತ್ತಿದ್ದರು.
Advertisement
Here u go!!
Penultimate ball SIX and then Harmanpreet Stunner in last ball of the innings !!#WIWvINDW pic.twitter.com/nMoZbDPx1N
— Merin Kumar ™ (@merin_kumar) November 1, 2019
Advertisement
ಹರ್ಮನ್‌ಪ್ರೀತ್ ಕೌರ್ ಹಿಡಿದ ಕ್ಯಾಚ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ಶತಮಾನದ ಅದ್ಭುತ ಕ್ಯಾಚ್, ಪುರುಷರಿಂದಲೂ ಈ ರೀತಿಯ ಕ್ಯಾಚ್ ಹಿಡಿಯಲು ಸಾಧ್ಯವಿಲ್ಲ ಎಂದು ಬಣ್ಣಿಸಿ ಕಮೆಂಟ್ ಮಾಡಿ ಹರ್ಮನ್ ಪ್ರೀತ್ ಅವರನ್ನು ಅಭಿನಂದಿಸುತ್ತಿದ್ದಾರೆ.
Advertisement
Extraordinary catch by Harmanpreet Kaur – Ind vs WI, 1st ODI at Antigua #WIWvINDW pic.twitter.com/8EsjeqsnyR
— Venkat Parthasarathy (@Venkrek) November 2, 2019
Advertisement
ಹರ್ಮನ್ ಪ್ರೀತ್ ಉತ್ತಮ ಕ್ಯಾಚ್ ಹಿಡಿದರೂ ಭಾರತ ಈ ಪಂದ್ಯವನ್ನು ಕೇವಲ 1 ರನ್ ಅಂತರದಿಂದ ಸೋತಿದೆ. ವಿಂಡೀಸ್ 7 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರೆ ಭಾರತ 224 ರನ್ ಗಳಿಗೆ ಆಲೌಟ್ ಆಯ್ತು. ಒಂದು ರನ್ ನಿಂದ ಪಂದ್ಯ ಗೆದ್ದಿರುವ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಪ್ರಿಯಾ ಪುನಿಯಾ 75 ರನ್(107 ಎಸೆತ, 6 ಬೌಂಡರಿ) ಜೆಮಿಮಾ ರೊಡ್ರಿಗಾಸ್ 41 ರನ್(67 ಎಸೆತ, 6 ಬೌಂಡರಿ,1 ಸಿಕ್ಸರ್) ಹೊಡೆದು ಔಟಾದರು. ಫೀಲ್ಡಿಂಗ್‍ನಲ್ಲಿ ಮಿಂಚಿದ ಹರ್ಮನ್ ಪ್ರೀತ್ 12 ಎಸೆತಗಳಲ್ಲಿ 5 ರನ್ ಗಳಿಸಿ ಕ್ಯಾಚ್ ನೀಡಿ ಹೊರ ನಡೆದರು.
Incredible catch from the Flying Woman of India. Whatta catch from Harmanpreet Kaur. ????????????????????????#WIWvINDW @ImHarmanpreet https://t.co/nnl01WU8ON
— T#€ ???????????? Gu¥ ???????? (@SarkarSpeaking) November 2, 2019