ನವದೆಹಲಿ: ಐಸಿಸಿ ವಿಶ್ವಕಪ್ ಗೆದ್ದ ಮಹಿಳಾ ತಂಡದ ಜೊತೆ ಸಂವಾದದ ವೇಳೆ ಆಟಗಾರ್ತಿಯರು ಪ್ರಧಾನಿ ಮೋದಿ (PM Modi) ಅವರಿಗೆ ಕೇಳಿದ ಪ್ರಶ್ನೆ ಗಮನ ಸೆಳೆದಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್ (Harleen Deol), ‘ಸರ್.. ನೀವು ತುಂಬಾ ಹೊಳೆಯುತ್ತೀರಿ. ನಿಮ್ಮ ತ್ವಚೆ ಆರೈಕೆಯ ದಿನಚರಿಯೇನು’ ಮೋದಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಕೆಯ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಮೋದಿ ಇನ್ನೂ ಖುಷಿಯಿಂದ, ‘ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ’ ಎಂದು ಉತ್ತರಿಸಿದರು. ಇದನ್ನೂ ಓದಿ: ವಿಶ್ವಕಪ್ ಗೆಲುವಿನ ಕ್ಯಾಚ್ ಹಿಡಿದು ಚೆಂಡನ್ನು ಜೇಬಿಗೆ ಹಾಕಿಕೊಂಡಿದ್ದೇಕೆ ಹರ್ಮನ್‌ಪ್ರೀತ್ – ಮೋದಿ ಬಳಿ ಹೇಳಿದ್ದೇನು?
ತಂಡದ ಮತ್ತೊಬ್ಬ ಆಟಗಾರ್ತಿ, ‘ಸರ್, ದೇಶವಾಸಿಗಳ ಪ್ರೀತಿಯೇ ನಿಮ್ಮನ್ನು ಪ್ರಕಾಶಮಾನಗೊಳಿಸುತ್ತದೆ’ ಎಂದು ಹೇಳಿದರು. ಈ ಮಾತು ಇನ್ನಷ್ಟು ನಗುವನ್ನು ಪ್ರೇರೇಪಿಸಿತು. ಮತ್ತೆ ಮಾತನಾಡಿದ ಮೋದಿ, ಖಂಡಿತ ಹೌದು. ಇದು ಶಕ್ತಿಯ ದೊಡ್ಡ ಮೂಲವಾಗಿದೆ. ನಾನು ಸರ್ಕಾರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದು ಹೇಳಿದರು.
ಭಾನುವಾರ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ತಮ್ಮ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಆಟಗಾರರೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಮೋದಿ ಜೊತೆ ಚಾಂಪಿಯನ್ನರು – ಸಹಿಹಾಕಿದ ಜೆರ್ಸಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ


