ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬೆಚ್ಚನೆಯ ವಾತಾವರಣವಿದೆ. ಇಂದು ಭಾನುವಾರ ರಜೆಯ ಕಾರಣ ಎಲ್ಲರು ಮನೆಯಲ್ಲಿ ಇರುತ್ತಾರೆ. ಈ ವಾತಾವರಣದಲ್ಲಿ ಏನಾದರೂ ಚಿಲ್ ಆಗಿ ಮಾಡಿಕೊಂಡು ತಿನ್ನೋಣ ಅಂದುಕೊಂಡಿರುತ್ತೀರಿ. ಹೀಗಾಗಿ ಸುಲಭವಾಗಿ ಗ್ರೀನ್‍ಚಿಲ್ಲಿ ಚಿಕನ್ ಮಾಡುವ ವಿಧಾನ ನಿಮಗಾಗಿ ಇಲ್ಲಿ ನೀಡಲಾಗಿದೆ.
ಬೇಕಾಗುವ ಸಾಮಾಗ್ರಿಗಳು
1. ಬೋನ್‍ಲೆಸ್ ಚಿಕನ್ – ಅರ್ಧ ಕೆ.ಜಿ
2. ಈರುಳ್ಳಿ – ಒಂದು
3. ಕೊತ್ತಂಬರಿ ಸೊಪ್ಪು – ಸ್ವಲ್ಪ
4. ಪುದಿನಾ – ಸ್ವಲ್ಪ
5. ಮೊಸರು – ಅರ್ಧ ಕಪ್
6. ಒಣಗಿದ ಮೆಂತ್ಯೆ ಎಲೆ ಪುಡಿ – ಒಂದು ಚಮಚ
7. ಹಸಿರು ಮೆಣಸಿನಕಾಯಿ – 10
8. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
9. ಚಕ್ಕೆ – 1
10. ಗರಂ ಮಸಾಲ ಪುಡಿ – 1 ಚಮಚ
11. ದನಿಯಾ ಪುಡಿ – 1 ಚಮಚ
12. ಜೀರಿಗೆ ಪುಡಿ – 1 ಚಮಚ
13. ಚಿಲ್ಲಿ ಪುಡಿ – ಅರ್ಧ ಚಮಚ
14. ಎಣ್ಣೆ -3-4 ಚಮಚ
15. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿ ಜಾರಿಗೆ ಪುದಿನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿಕಾಯಿ, ಮೊಸರು ಹಾಕಿ ರುಬ್ಬಿಕೊಳ್ಳಿ.
* ಈಗ ಒಂದು ಬೌಲ್ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಸಣ್ಣದಾಗಿ ಕತ್ತರಿಸಿದ್ದ ಚಕ್ಕೆ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.
* ನಂತರ ತೊಳೆದ ಚಿಕನ್ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
* ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ದನಿಯಾ, ಜೀರಿಗೆ ಮತ್ತು ಚಿಲ್ಲಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ರುಬ್ಬಿದ ಮಸಲಾ, ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 4-5ರಿಂದ ನಿಮಿಷ ಪ್ಲೇಟ್ ಮುಚ್ಚಿ ಬೇಯಿಸಿ.
* ಈಗ ಒಣಗಿದ ಮೆಂತ್ಯೆ ಎಲೆ ಪುಡಿ ಹಾಕಿದರೆ ಗ್ರೀನ್ ಚಿಕನ್ ಫ್ರೈ ಸವಿಯಲು ಸಿದ್ಧ.