Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ

Cinema

ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ

Public TV
Last updated: January 28, 2026 2:11 pm
Public TV
Share
3 Min Read
Suri Anna 2
SHARE

ಸಲಗ ಸೂರಿ ಅಣ್ಣ ಖ್ಯಾತಿಯ ನಟ ದಿನೇಶ್ ಕುಮಾರ್ (Dinesh Kumar) ಅವರ ನಿರ್ಮಾಣ ಹಾಗೂ ನಿರ್ದೇಶನದ ಸೂರಿ ಅಣ್ಣ (Suri Anna) ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ನೆರವೇರಿತು. ಹರೀಶ್ ರಾಯ್ (Harish Roy) ನಟಿಸಿದ ಕೊನೆಯ ಚಿತ್ರ ಇದಾಗಿದ್ದು, ಅವರ ಪತ್ನಿ ಆರತಿ ಅವರ ಕೈಲೇ ಚಿತ್ರದ ಟ್ರೈಲರ್ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.

ಟ್ರೈಲರ್ ರಿಲೀಸ್ ಮಾಡಿದ ಹರೀಶ್ ರಾಯ್ ಪತ್ನಿ ಆರತಿ ಮಾತನಾಡಿ ಇದು ನಮ್ಮ ಯಜಮಾನರ ಕಡೇ ಸಿನಿಮಾ ಅಂತ ನನಗೂ ಗೊತ್ತಿರಲಿಲ್ಲ. ಈ ಚಿತ್ರಕ್ಕೆ ಖಂಡಿತ ಒಳ್ಳೆಯದಾಗುತ್ತೆ. ಕಷ್ಟದ ಸಮಯದಲ್ಲಿ ಚಿತ್ರರಂಗದ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ನನ್ನಪತಿ ಕೊನೆಯವರೆಗೂ ಸಿನಿಮಾ ಬಗ್ಗೆಯೇ ಧ್ಯಾನಿಸುತ್ತಿದ್ದರು. ನನ್ನ ಮಗನೂ ಬೆಳೆದಿದ್ದಾನೆ. ಈತನಿಗೆ ನಿಮ್ಮ ಸಪೋರ್ಟ್ ಬೇಕು. ನಮ್ಮನ್ನು ಮರೆಯಬೇಡಿ ಎಂದು ಕೇಳಿಕೊಂಡರು.

ನಟ ಪ್ರವೀಣ್ ಮಾತನಾಡಿ ಈ ಚಿತ್ರದಲ್ಲಿ ನಾನು ಬ್ಯಾಟ್ ಎಂಬ ಪಾತ್ರ ಮಾಡಿದ್ದೇನೆ. ಮಾರಿಗುಡ್ಡದಲ್ಲಿ ಲೀಡ್ ಆಗಿದ್ದೆ. ಈ ಚಿತ್ರಕ್ಕೆ ವಿಶ್ವ ಅವರು ಕೊಟ್ಟ ಕೊಡುಗೆ ತುಂಬಾ ದೊಡ್ಡದು. ಆತ ದೈಹಿಕವಾಗಿ ನಮ್ಮೊಂದಿಗಿಲ್ಲ, ಆದರೆ ಯಾವಾಗಲೂ ನಮ್ಮಮನದಲ್ಲಿದ್ದಾರೆ ಎಂದರು. ಜಾಕ್ ಜಾಲಿ ಮಾತನಾಡಿ ಚಿತ್ರದಲ್ಲಿ ಸೂರಿಯಣ್ಣನಿಗಾಗಿ ಒಂದೇ ದಿನ ಬಂದು ಹೋಗುವ ಪಾತ್ರ ಮಾಡಿದ್ದೇನೆ. ಟ್ರೈಲರ್ ಸಖತ್ತಾಗಿ ಬಂದಿದೆ. ಈ ಸಿನಿಮಾ ಖಂಡಿತ ಸಕ್ಸಸ್ ಆಗಲಿದೆ ಎಂದರು. ಪ್ರಸಾದ್ ಮಾತನಾಡುತ್ತ ನಾನು ಕಳೆದ 25 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಬಹುತೇಕ ಸ್ಟಾರ್ ಗಳಿಗೆ ಜಿಮ್ ಹೇಳಿಕೊಟ್ಡಿದ್ದೇನೆ. ಯಾವತ್ತೂ ತೆರೆ ಮೇಲೆ ಬಂದವನಲ್ಲ. ಸೂರಿ ಅವರು ಪಾತ್ರ ಮಾಡಿಸಿದ್ದಾರೆ ಎಂದರು.  ಇದನ್ನೂ ಓದಿ: ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್

Suri Anna 1

ನಟ ಕಾಮರಾಜ್ (ತಮಿಳ್ ಐ ಮೂವಿ ವಿಲನ್) ಮಾತನಾಡುತ್ತ ಕಬ್ಜ, ಘೋಸ್ಟ್ ಸೇರಿದಂತೆ ನಾನು ನಟಿಸಿರುವ ಐದನೇ ಚಿತ್ರವಿದು. ನಾನು ಎಲ್ಲೇ ಹೋದರೂ ಕನ್ನಡ ಸಿನಿಮಾ ಬಗ್ಗೆಯೇ ಮಾತಾಡ್ತಾರೆ ಎಂದರು. ನಾಯಕ, ನಿರ್ದೇಶಕ ಸೂರಿ ಅಣ್ಣ ಮಾತನಾಡುತ್ತ ಫೆ.20ಕ್ಕೆ ನಮ್ಮ ಸೂರಿ ಅಣ್ಣ ರಿಲೀಸ್ ಆಗುತ್ತಿದೆ. ಚಿತ್ರಕ್ಕಾಗಿ ಕಳೆದ ಆರು ವರ್ಷದಿಂದ ಕಷ್ಟಪಟ್ಟಿದ್ದೇನೆ. ಸಮಾಜಕ್ಕೆ ಒಳ್ಳೆ ಮೆಸೇಜ್ ಈ ಚಿತ್ರದಲ್ಲಿ ಇರಲಿದೆ. ಜಯಣ್ಣ ಫಿಲಂಸ್ ನ ಜಯಣ್ಣ ಅವರು ಚಿತ್ರವನ್ನು ರಿಲೀಸ್ ಮಾಡಿಕೊಡುತ್ತಿದ್ದು, ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ, ಮಾಜಿ ರೌಡಿಗಳ ಕೈಲಿ ಯುವಕರಿಗೆ ಮೆಸೇಜ್ ಹೇಳಿಸಿದ್ದೇನೆ. ಯಾರೂ ಸಹ ಈ ರೌಡಿಸಂಗೆ ಬರಬೇಡಿ ಅಂತ ಈ ಚಿತ್ರದಲ್ಲಿ ತೋರಿಸಿದ್ದೇನೆ. ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ನಟಿ ಚಿತ್ರಾಲ ಮಾತನಾಡಿ ಸೂರಿ ಈ ಸಿನಿಮಾಗೆ ತುಂಬಾ ಕಷ್ಟಪಟ್ಟಿದ್ದಾರೆ. ನೀನನ್ನ ದೇವತೆ ಹಾಡು ತುಂಬಾ ತುಂಬಾ ವೈರಲ್ ಆಗಿದೆ. ನನಗೆ ರಾ ಪಾತ್ರಗಳು ತುಂಬಾ ಇಷ್ಟ. ಓಂ ಸಿನಿಮಾ ನಂತರ ರಿಯಲ್ ರೌಡಿಗಳು ಆಕ್ಟ್ ಮಾಡಿದ ಚಿತ್ರವಿದು. ಅದ್ಭುತವಾದ ಮೆಸೇಜ್ ಇರೋ ಚಿತ್ರ ಎಂದರು.

ನಾಯಕಿ ಸಂಭ್ರಮ ಶ್ರೀ ಮಾತನಾಡಿ ಸೂರಿ ಅಣ್ಣ ಈ ಚಿತ್ರಕ್ಕಾಗಿ ಮನೆ, ಜಾಗವನ್ನು ಮಾರಿದ್ದಾರೆ. ಡಾನ್‌ಗಳಿಂದ ಯುವಜನರಿಗೆ ಒಳ್ಳೆಯ ಮೆಸೇಜ್ ಹೇಳಲಾಗಿದೆ ಎಂದರು. ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಎಡಿಟರ್ ವಿಶ್ವ, ಬಿಜಿಎಂ ಮಾಡಿದ ಶ್ರೀಧರ್ ಕಶ್ಯಪ್, ರಂಜಿತ್, ಬೆನಕ ನಂಜಪ್ಪ ಚಿತ್ರದ ಕುರಿತು ಮಾತನಾಡಿದರು. ಈ ಚಿತ್ರದಲ್ಲಿ ಸೂರಿ ಅಣ್ಣ, ಸಂಭ್ರಮ ಶ್ರೀ, ಬೇಬಿ ಮಾರೀಶ, ಹರೀಶ್ ರಾಯ್, ರವಿಕಾಳೆ, ಕಾಮ್ ರಾಜ್, ಎಸ್.ಕೆ ಉಮೇಶ್, ಹೊನ್ನವಳ್ಳಿ ಕೃಷ್ಣ, ಪ್ರಕಾಶ್ ತುಮ್ಮಿನಾಡ್, ರೇಖಾದಾಸ್, ಕಾಕ್ರೋಚ್ ಸುಧಿ, ವಿನಯ್ ಗೌಡ, ಜಾಲಿ ಜಾಕ್, ಪ್ರಸಾದ್ ಕುಮಾರ್ ಹಾಗೂ ಒಂದು ಕಾಲದಲ್ಲಿ ಗ್ಯಾಂಗ್ ಸ್ಟಾರ್ಸ್ ಗಳಾಗಿದ್ದ ಮೊಟ್ಟ ಕಣ್ಣ, ಜೇಡರಳ್ಳಿ ಕೃಷ್ಣಪ್ಪ, ಜೀಬ್ರಾ, ಲೋಕೇಶ್, ಕಾಳ ಪತಾರ್, ಯಶಸ್ವಿನಿ ಗೌಡ, ವೇಡಿ ಅಣ್ಣ, ಗಡ್ಡ ನಾಗ, ಅಭಿನಯಿಸಿದ್ದಾರೆ.

TAGGED:cinemaDinesh KumarHarish RoySuri Annaಸಲಗ ಸೂರಿ ಅಣ್ಣಸಿನಿಮಾಸೂರಿ ಅಣ್ಣಹರೀಶ್ ರಾಯ್
Share This Article
Facebook Whatsapp Whatsapp Telegram

Cinema news

Arijith Singh
ಹಿನ್ನೆಲೆ ಗಾಯನಕ್ಕೆ ಗುಡ್ ಬೈ ಹೇಳಿದ ಅರಿಜಿತ್ ಸಿಂಗ್
Bollywood Cinema Latest Main Post
kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories

You Might Also Like

Earthquake General Photo
Bidar

ಬೀದರ್‌ನಲ್ಲಿ 1.8 ತೀವ್ರತೆಯ ಲಘು ಭೂಕಂಪನ – ಬೆಚ್ಚಿದ ಜನ

Public TV
By Public TV
7 minutes ago
Bidar Businessman Car Accident
Bidar

ಜಾತ್ರೆಗೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ – ಯುವ ಉದ್ಯಮಿಯ ದುರಂತ ಅಂತ್ಯ

Public TV
By Public TV
12 minutes ago
ajit pawar plane crash
Latest

ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್‌, ಬಟ್ಟೆಯಿಂದ ಅಜಿತ್‌ ಪವಾರ್‌ ಗುರುತು ಪತ್ತೆ

Public TV
By Public TV
57 minutes ago
Bombardier Learjet 45 Ajit Pawars Private Jet
Latest

ಮೂರು ವರ್ಷದ ಒಳಗಡೆ ಎರಡನೇ ಬಾರಿ ವಿಎಸ್‌ಆರ್‌ ಕಂಪನಿಯ ವಿಮಾನ ಪತನ

Public TV
By Public TV
2 hours ago
delta beach boat accident disha death
Latest

ಉಡುಪಿಯ ಪ್ರವಾಸಿ ಬೋಟ್ ದುರಂತ ಕೇಸ್; ಯೂಟ್ಯೂಬರ್ ನಿಶಾ, ಮಧು ಗೌಡ ಸ್ನೇಹಿತೆ ಸಾವು

Public TV
By Public TV
3 hours ago
ajit pawars plane crashes during second landing attempt
Latest

2ನೇ ಬಾರಿ ಲ್ಯಾಂಡಿಂಗ್‌ ಪ್ರಯತ್ನದಲ್ಲಿದ್ದಾಗ ಅಜಿತ್‌ ಪವಾರ್‌ ವಿಮಾನ ಪತನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?