ಬೆಂಗಳೂರು: ಯಾವುದೇ ಕಾಯಿನ್ ವಿಚಾರಕ್ಕೂ ನನ್ನ ಮಗ ಉಮರ್ ನಲಪಾಡ್‍ಗೂ ಸಂಬಂಧ ಇಲ್ಲ ಎಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.
Advertisement
ಬಿಟ್ ಕಾಯಿನ್ ವಿಚಾರದಲ್ಲಿ ನಲಪಾಡ್ ಶಾಮೀಲಾಗಿದ್ದು ಈ ವಿಚಾರವಾಗಿ ನಲಪಾಡ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಮಾಧುಮದವರೊಂದಿಗೆ ಮಾತನಾಡಿದ ಹ್ಯಾರಿಸ್ ಅವರು, ಇದೆಲ್ಲಾ ಸುಳ್ಳು ಸುದ್ದಿಯಾಗಿದೆ. ನಮಗೆ ಆಗದೇ ಇರುವವರು ನಲಪಾಡ್ ವಿರೋಧಿಗಳು ಬೇಕಂತಲೇ ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಜನವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲಪಾಡ್ ವಹಿಸಿಕೊಳ್ಳುತ್ತಿದ್ದಾನೆ. ಇದಕ್ಕಾಗಿ ವಿರೋಧ ಪಕ್ಷದವರು ಮಾಡಿರುವ ತಂತ್ರ ಇರಬಹುದು. ಇಲ್ಲ ನಮ್ಮ ಪಕ್ಷದವರೇ ಷಡ್ಯಂತ್ರ್ಯ ಮಾಡಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ ಜಾರಿ ನದಿಗೆ ಬಿದ್ದ ಯುವಕ ಕಣ್ಮರೆ!
Advertisement
Advertisement
ಯಾವುದೋ ಒಂದು ಕೇಸ್ ಆಯಿತು ಅಂತ ಎಲ್ಲದಕ್ಕೂ ಅವನ ಹೆಸರನ್ನು ಜೋಡಿಸಲಾಗುತ್ತಿದೆ. ನಲಪಾಡ್ ಈಗ ಸಾಮಾಜಿಕ ಕೆಲಸದಲ್ಲಿ ತೊಡಗಿದ್ದಾನೆ. ಯಾವುದೇ ಕಾಯಿನ್ ವಿಚಾರಕ್ಕೂ ನಲಪಾಡ್‍ಗೂ ಸಂಬಂಧ ಇಲ್ಲ. ನಾವು ನಮ್ಮ ಬ್ಯುಸಿನೆಸ್ ನೋಡಿಕೊಂಡು ಇದ್ದೇವೆ. ಈ ತರ ತುಳಿಯುವ ಯತ್ನ ಮಾಡಬಾರದು. ಇಡಿ ನೋಟಿಸ್ ಕೊಡುವುದು ಯಾವತ್ತು ಯಾರಿಗೂ ಗೊತ್ತಾಗುವುದಿಲ್ಲ. ಮಾಧ್ಯಮದವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ
Advertisement
ಶ್ರೀಕಿ ನಲಪಾಡ್‍ಗೆ ಫ್ರೆಂಡೋ ಇಲ್ಲವೂ ಎಂಬುವುದು ಗೊತ್ತಿಲ್ಲ. ನಲಪಾಡ್ ಎಲ್ಲಾ ಸ್ನೇಹಿತರು ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಪ್ರಕಾರ ನನ್ನ ಮಗ ಯಾವುದೇ ಕಾಯಿನ್ ವ್ಯವಹಾರ ಮಾಡಿಲ್ಲ. ನಲಪಾಡ್ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಇದೆಲ್ಲಾ ನಡೆಯುತ್ತಿದೆ. ಸಿಎಲ್‍ಪಿ ಲೀಡರ್ ಮತ್ತು ನಮ್ಮ ನಾಯಕರಿಗೆ ಷಡ್ಯಂತ್ರ ವಿಚಾರ ಗೊತ್ತು ಎಂದು ತಿಳಿಸಿದ್ದಾರೆ.