ಒಂದೊಳ್ಳೆ ಸಿನಿಮಾದ ಸುದ್ದಿಯೊಂದಿಗೆ ಬರೋದಾಗಿ ತಿಳಿಸಿದ ಹರಿಪ್ರಿಯಾ

Public TV
1 Min Read
haripriya 2

ನ್ನಡತಿ, ಬಹುಭಾಷಾ ನಟಿ ಹರಿಪ್ರಿಯಾ (Haripriya) ಸದ್ಯ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಲಾಯರ್ ಕೋಟು ಧರಿಸಿ ಎಂಟ್ರಿ ಕೊಟ್ಟ ನಟಿ ಸೀರಿಯಲ್ ಪ್ರೋಮೋವೊಂದು ರಿಲೀಸ್ ಆಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದು, ಮುಂಬರುವ ಸಿನಿಮಾ ಬಗ್ಗೆ ಕೂಡ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

haripriya2

ನಮಸ್ಕಾರ, ಎಲ್ಲರೂ ಹೇಗಿದ್ದೀರಿ? ನಾನು ಯಾವುದೇ ಧಾರಾವಾಹಿಯನ್ನು ಒಪ್ಪಿಲ್ಲ. ನಾನು ನಿರ್ವಹಿಸಿರುವುದು ಒಂದೆರೆಡು ದಿನಗಳ ಅತಿಥಿ ಪಾತ್ರವಷ್ಟೇ. ಒಂದೊಳ್ಳೆಯ ಸಿನಿಮಾದ ಸುದ್ದಿಯೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲೇ ಬರಲಿದ್ದೇನೆ ಎಂದು ನಟಿ ತಿಳಿಸಿದ್ದಾರೆ. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆಗಳಿರಲಿ ಎಂದಿದ್ದಾರೆ. ಇದನ್ನೂ ಓದಿ:ಸದ್ಯದಲ್ಲೇ ಶುರುವಾಗಲಿದೆ ‘ಬಿಗ್ ಬಾಸ್’ ಒಟಿಟಿ- ಪ್ರಸಾರಕ್ಕೆ ಡೇಟ್‌ ಫಿಕ್ಸ್

FotoJet 11ಲಾಯರ್ ಆಗಿ ‘ಅಹನ ಅಗ್ನಿಹೋತ್ರ’ ಎಂಬ ಪಾತ್ರದಲ್ಲಿ ಎಂಟ್ರಿ ಕೊಡುವ ಬಗ್ಗೆ ಸೀರಯಲ್ ಪ್ರೋಮೋವೊಂದು ರಿವೀಲ್ ಆಗಿತ್ತು. ಈ ಪ್ರೋಮೋ ನೋಡ್ತಿದ್ದಂತೆ ನಟಿ ಕಿರುತೆರೆಗೆ ಪಾದರ್ಪಣೆ ಮಾಡುತ್ತಿದ್ದಾರೆ ಎಂದೇ ಹೇಳಲಾಗಿತ್ತು. ಅದಕ್ಕೆ ನಟಿಯೇ ಉತ್ತರ ನೀಡಿದ್ದಾರೆ.

Vasishta simha and haripriya 2

ಕಳೆದ ವರ್ಷ ಪತಿ ವಸಿಷ್ಠ ಸಿಂಹ (Vasista Simha) ಮತ್ತು ದಿಗಂತ್ ಜೊತೆ ‘ಯದಾ ಯದಾ ಹಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದರು. ಇದೀಗ ಹೊಸ ಬಗೆಯ ಕಥೆಗಳನ್ನು ನಟಿ ಕೇಳುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಗಲಿದೆ.

ಜನವರಿ 26, 2023ರಂದು ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಮದುವೆಯಾಗಿದ್ದಾರೆ. ವಸಿಷ್ಠ ಕನ್ನಡ ಸೇರಿದಂತೆ ಸೌತ್ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article