ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ‘ಅಪಾಯವಿದೆ ಎಚ್ಚರಿಕೆ’ (Apaayavide Eccharike) ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಟ್ರೈಲರ್ ಹಾಗೂ ಚಿತ್ರತಂಡ ಬಿಚ್ಚಿಟ್ಟಿರುವ ಒಂದಷ್ಟು ವಿಚಾರಗಳು ಇದೊಂದು ಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶವನ್ನು ಪ್ರೇಕ್ಷಕರತ್ತ ರವಾನಿಸಿದೆ. ಇದು ಹಾರರ್ ಥ್ರಿಲ್ಲರ್ ಜಾನರಿಗೆ ಒಳಪಡುವ ಸಿನಿಮಾ ಇದಾಗಿದೆ. ಟ್ರೈಲರ್‌ನಲ್ಲಿ ಕಾಣಿಸಿರುವ, ಚಿತ್ರತಂಡ ಹೇಳಿಕೊಂಡಿರುವ ವಿಚಾರಗಳಾಚೆ ಈ ಸಿನಿಮಾದಲ್ಲಿ ಒಂದಷ್ಟು ಅಚ್ಚರಿಗಳಿವೆ ಅನ್ನೋದನ್ನು ಹರಿಣಿ ಶ್ರೀಕಾಂತ್ (Harini Shreekanth) ಅವರು ನಿರ್ವಹಿಸಿರುವ ಪಾತ್ರದ ಚಹರೆಗಳು ಜಾಹೀರು ಮಾಡುತ್ತಿವೆ. ಇದನ್ನೂ ಓದಿ:ಹೊಸ ಚಿತ್ರಕ್ಕೆ ಸಹಿ ಹಾಕಿದರು ನಿಮಿಕಾ ರತ್ನಾಕರ್!
ಅನೇಕ ಸೀರಿಯಲ್‌ಗಳು ಮತ್ತು ಸಿನಿಮಾಗಳಲ್ಲಿ ಥರ ಥರದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಮನ ಸೆಳೆದಿರುವವರು ಹರಿಣಿ ಶ್ರೀಕಾಂತ್. ಇತ್ತೀಚಿನ ದಿನಗಳಲ್ಲಿಯಂತೂ ಮತ್ತಷ್ಟು ಮಜಲಿನ ಪಾತ್ರಗಳಿಗೂ ಹರಿಣಿ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಅವರೀಗ ‘ಅಪಾಯವಿದೆ ಎಚ್ಚರಿಕೆ’ ಚಿತ್ರದಲ್ಲಿಯೂ ಮಹತ್ವದ್ದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅದರ ಸಣ್ಣದೊಂದು ಝಲಕ್ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಹರಿಣಿ ಶ್ರೀಕಾಂತ್ ಅವರು ನಿರ್ವಹಿಸಿರೋದು ಒಂದು ವಿಶೇಷ ಪಾತ್ರ ಎಂಬ ಮಾಹಿತಿಯಷ್ಟೇ ಲಭಿಸಿತ್ತು. ಅದು ಫ್ಲಾಶ್ ಬ್ಯಾಕಲ್ಲಿ ಬರುವ, ಅತ್ಯಂತ ಮಹತ್ವದ ಕ್ಯಾರೆಕ್ಟರ್ ಅಂತಷ್ಟೇ ಮಾಹಿತಿ ಅಂತಷ್ಟೇ ಮಾಹಿತಿ ಸಿಕ್ಕಿತ್ತು. ಕಡೆಗೂ ಆ ಪಾತ್ರದ ಅಸಲೀಯತ್ತು ಬಯಲಾಗಿದೆ. ಅದನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಅಪಾಯವಿದೆ ಎಚ್ಚರಿಕೆ ಅಂದಳೇಕೆ ರಾಮಾಚಾರಿಯ ತಂಗಿ?
Advertisement
ಇವರು ನಿರ್ವಹಿಸಿರೋ ಪಾತ್ರವೇ ಒಟ್ಟಾರೆ ಕಥೆಗಿರಬಹುದಾದ ಮತ್ತೊಂದಷ್ಟು ಲಿಂಕುಗಳು, ಬೆರಗುಗಳ ಕೊಂಡಿಯಂತೆ ಮೂಡಿ ಬಂದಿದೆ. ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಇಲ್ಲಿನ ಪ್ರತಿ ಪಾತ್ರಗಳನ್ನು ಅತ್ಯಂತ ಆಸ್ಥೆಯಿಂದ, ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಒಂದೊಂದು ಪಾತ್ರಗಳನ್ನೂ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿ ಕೊಟ್ಟಿದ್ದಾರಂತೆ. ಅದೆಲ್ಲದರ ಅಸಲಿ ಸ್ವಾದ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ. ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.
Advertisement