ಮುಂಬೈ: ಕೊಲ್ಕತ್ತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಉತ್ತಪ್ಪ ನೀಡಿದ್ದ ಕ್ಯಾಚ್ ಮುಂಬೈ ಯುವ ಆಟಗಾರ ಮಯಾಂಕ್ ಮಾರ್ಕಂಡೆ ಡ್ರಾಪ್ ಮಾಡಿದಕ್ಕೆ ಹಾರ್ದಿಕ್ ಪಾಂಡ್ಯ ಕೋಪ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದ 6ನೇ ಓವರ್ ವೇಳೆ 4 ರನ್ ಗಳಿಸಿದ್ದ ಉತ್ತಪ್ಪ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಈ ವೇಳೆ ಮಯಾಂಕ್ ಕೈಗೆ ಬಂದಿದ್ದ ಬಾಲನ್ನು ಹಿಡಿಯಲು ವಿಫಲರಾಗಿದ್ದರು. ಇದರಿಂದ ಕ್ಷಣ ಮಾತ್ರ ಶಾಕ್ ಗೆ ಒಳಗಾದ ಹಾರ್ದಿಕ್, ಮಾರ್ಕಂಡೆ ವಿರುದ್ಧ ಕೋಪ ಪ್ರದರ್ಶಿಸಿದರು. ಜೀವದಾನ ಪಡೆದ ಬಳಿಕ ಉತ್ತಪ್ಪ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದರು. ಕೇವಲ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅರ್ಧ ಶತಕ (54 ರನ್) ಸಿಡಿಸಿದರು.
Advertisement
— vineet kishor (@vineetkishor2) May 6, 2018
Advertisement
ಸದ್ಯದ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯದ ಮುಂಬೈ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಕನಸನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಅದ್ದರಿಂದ ಆನ್ ಫೀಲ್ಡ್ ನಲ್ಲಿ ಮಾಡುವ ಪ್ರತಿ ತಪ್ಪಿಗೂ ತಂಡ ಭಾರೀ ದಂಡ ತೆರಬೇಕಾಗುತ್ತದೆ. ಸದ್ಯ ಕೆಕೆಆರ್ ವಿರುದ್ಧ ಗೆಲುವು ಪಡೆದ ಮುಂಬೈ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದೆ.
Advertisement
4 ಸಾವಿರ ರನ್: ಮುಂಬೈ ವಿರುದ್ಧ 54 ರನ್ ಗಳೊಂದಿಗೆ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಡೇವಿಡ್ ವಾರ್ನರ್ ರನ್ನು ಹಿಂದಿಕ್ಕಿದರು. ಒಟ್ಟು 159 ಪಂದ್ಯಗಳಲ್ಲಿ 29.25 ಸರಾಸರಿಯಲ್ಲಿ 4,37 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೈನಾ (4,801 ರನ್), ಕೊಹ್ಲಿ (4,775 ರನ್) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದಾರೆ.