ಮುಂಬೈ: ಊಹಾಪೋಹಗಳ ನಡುವೆ ಕೊನೆಗೂ ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಮುಂಬೈ ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.
ಕಳೆದ ಎರಡು ಮೂರು ದಿನಗಳಿಂದಲೂ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ಸೇರುವುದು ಖಚಿತವಾಗಿದೆ ಎಂದು ಹೇಳಲಾಗಿತ್ತು. ಗುಜರಾತ್ ತಂಡವು ಸಹ ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು. ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಬಂದ್ರೆ ಅವರೇ ಮುಂದಿನ ನಾಯಕನಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. ಆದ್ರೆ ಗುಜರಾತ್ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂ.ಗಳಿಗೆ ತನ್ನಲ್ಲೇ ಉಳಿಸಿಕೊಂಡಿದೆ. ಇದನ್ನೂ ಓದಿ: IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ
Advertisement
Advertisement
ಟೈಟಾನ್ಸ್ ತಂಡವು ಡಿಸೆಂಬರ್ 19ರಂದು ನಡೆಯಲಿರುವ ಹರಾಜಿಗೆ ಮುನ್ನ ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಮತ್ತು ದಸುನ್ ಶನಾಕ ಸೇರಿದಂತೆ ಮೂರು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 8 ಆಟಗಾರರಿಗೆ ಗೇಟ್‍ಪಾಸ್ ಕೊಟ್ಟಿದೆ.
Advertisement
ಹಾರ್ದಿಕ್ ಪಾಂಡ್ಯ ಅವರನ್ನು 2022ರ ಮೆಗಾ ಹರಾಜಿನ ಡ್ರಾಫ್ಟ್‌ನಲ್ಲಿ ಗುಜರಾತ್ ಟೈಟಾನ್ಸ್ ಆಯ್ಕೆ ಮಾಡಿತ್ತು. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಪ್ರತಿನಿಧಿಸಿತ್ತು. ಟೈಟಾನ್ಸ್ ಪರ ನಾಯಕನಾಗಿ ಪ್ರತಿನಿಧಿಸಿದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದರು. ಅಲ್ಲದೇ 2023ರ ಆವೃತ್ತಿಯಲ್ಲಿ ರನ್ನರ್ ಅಪ್ ದಕ್ಕುವಂತೆ ಮಾಡಿದ್ದರು.
Advertisement
ಜಿಟಿ ಉಳಿಸಿಕೊಂಡ ಆಟಗಾರರು:
ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್, ಮೊಹಮ್ಮದ್ ಶಮಿ, ಸಾಯಿ ಸುದರ್ಶನ್, ಮೋಹಿತ್ ಶರ್ಮಾ, ಶುಭಮನ್ ಗಿಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಸಾಯಿ ಕಿಶೋರ್, ಜೋಶುವಾ ಲಿಟಲ್, ರಶೀದ್ ಖಾನ್.
ಬಿಡುಗಡೆಯಾದ ಆಟಗಾರರು:
ಕೆಎಸ್ ಭರತ್, ಶಿವಂ ಮಾವಿ, ಒಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದಾಸುನ್ ಶನಕ, ಯಶ್ ದಯಾಳ್, ಉರ್ವಿಲ್ ಪಟೇಲ್, ಪ್ರದೀಪ್ ಸಾಂಗ್ವಾನ್. ಇದನ್ನೂ ಓದಿ: IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್