ಮುಂಬೈ: ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಹಾಗು ಸೆಕ್ಸ್ ಬಗ್ಗೆ ಆಕ್ಷೇಪರ್ಹವಾಗಿ ಮಾತನಾಡಿ ಟೀಕೆಗೆ ಗುರಿಯಾದ ಟೀಂ ಇಂಡಿಯಾ ಆಟಗಾರರ ಬಗ್ಗೆ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಂಡ್ಯ, ರಾಹುಲ್ ನೀಡಿರುವ ಹೇಳಿಕೆಗಳು ಅವರ ನೈಜತೆಯ ಪ್ರತೀಕವಲ್ಲ ಎಂದು ನಾನು ನಂಬುತ್ತೇನೆ. ಇಂತಹ ಘಟನೆಯಿಂದ ಅವರು ಹೊರ ಬರುವ ನಂಬಿಕೆ ನನಗೆ ಇದ್ದು, ಈ ವೇಳೆ ಆಟಗಾರು ಅತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ನಡವಳಿಕೆಯನ್ನು ಯಾರು ಕೂಡ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಇಬ್ಬರು ಆಟಗಾರು ಇದರಿಂದ ಹೊರ ಬಂದು ತಮ್ಮ ಗುರಿ ಸಾಧಿಸಿದರೆ ಮುಂದೊಂದು ದಿನ ಮಾದರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಟಗಾರರು ಮಾಡಿದ ತಪ್ಪಿನಿಂದ ಪಾಠ ಕಲಿಯಬೇಕು, ಎಲ್ಲವೂ ಕಲಿಕೆಯ ಭಾಗವಾಗಿದೆ. ಇಬ್ಬರಿಗೂ ನಾನು ತರಬೇತಿ ನೀಡಿದ್ದೇನೆ. ಉತ್ತಮ ಸಾಮಥ್ರ್ಯ ಹೊಂದಿರುವ ಆಟಗಾರರಾಗಿದ್ದು, ಖಂಡಿತ ಸಾಧನೆ ಮಾಡುತ್ತಾರೆ ಎಂದರು. ಸದ್ಯ ಬಿಸಿಸಿಐ ನಿಷೇಧ ತೆರವುಗೊಳಿಸಿರುವುದರಿಂದ ಕೆಎಲ್ ರಾಹುಲ್ ಟೀಂ ಇಂಡಿಯಾ ಎ ತಂಡದ ಪರ ಆಡಲಿದ್ದು, ರಾಹುಲ್ ದ್ರಾವಿಡ್ ಗರಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.
ಇಬ್ಬರು ಆಟಗಾರರು ಈಗಾಗಲೇ ತಮ್ಮ ತಪ್ಪಿನ ಬಗ್ಗೆ ಬಿಸಿಸಿಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಕ್ಷಮೆ ಕೋರಿದ್ದು, ಪಾಂಡ್ಯ ನ್ಯೂಜಿಲೆಂಡ್ ಪ್ರವಾಸದ ಹಾಗೂ ರಾಹುಲ್ ಟೀಂ ಇಂಡಿಯಾ ಎ ತಂಡದ ಪರ ಆಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv