ಮುಂಬೈ: ಐಪಿಎಲ್ 2024ರ ಆವೃತ್ತಿಗೆ (IPL) ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಕಳೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಇದೀಗ ಮತ್ತೆ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಮಿನಿ ಹರಾಜಿಗೂ ಮುನ್ನವೇ ಗುಜರಾತ್ ಟೈಟಾನ್ಸ್ (Gujarat Titans) ತೊರೆದು ಅವರು ಮುಂಬೈ ಸೇರಿದ್ದಾರೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪಾಂಡ್ಯ ಅನೇಕ ನೆನಪುಗಳು ಕಣ್ಗಳ ಮುಂದೆ ಹಾದು ಹೋದವು, ನನಗೆ ಮರಳಿ ಮುಂಬೈ ಸೇರಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಐಪಿಎಲ್‍ನ ನೂತನ ಆವೃತ್ತಿಗೂ ಮುನ್ನ ಪಾಂಡ್ಯ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹೀಗಾಗಿ ಹಾರ್ದಿಕ್ ಐಪಿಎಲ್ 2024ಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಸೇರಲು ಅವರು ಚರ್ಚೆ ನಡೆಸಿದ್ದರು ಎಂದು ಹಿಂದೆ ವರದಿಯಾಗಿತ್ತು. ಪಾಂಡ್ಯ ಅವರನ್ನು 2022ರ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ರಿಲೀಸ್ ಮಾಡಿತ್ತು. ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು 2022ರ ಮೆಗಾ ಹರಾಜಿನ ಡ್ರಾಫ್ಟ್‌ನಲ್ಲಿ ಟೈಟಾನ್ಸ್ ಆಯ್ಕೆ ಮಾಡಿತ್ತು.
Advertisement
Advertisement
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಸೇರುವುದಕ್ಕೂ ಮುನ್ನ 7 ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಪ್ರತಿನಿಧಿಸಿತ್ತು. ಟೈಟಾನ್ಸ್ ಪರ ನಾಯಕನಾಗಿ ಪ್ರತಿನಿಧಿಸಿದ್ದ ಪಾಂಡ್ಯ ತನ್ನ ಚೊಚ್ಚಲ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಆಗುವಂತೆ ಮಾಡಿದರು. ಅಲ್ಲದೇ 2023ರಲ್ಲಿ ಗುಜರಾತ್ ದ್ವಿತೀಯ ಸ್ಥಾನ ಪಡೆದಿತ್ತು.
Advertisement
Advertisement
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ವಾಪಸಾಗಿದ್ದಕ್ಕೆ ನೀತಾ ಅಂಬಾನಿ ವಿಶೇಷ ಪ್ರತಿಕ್ರಿಯೆ ನೀಡಿದ್ದಾರೆ. ಅವರನ್ನು ಮನೆಗೆ ಮರಳಿ ಸ್ವಾಗತಿಸಲು ನಾವು ಕಾತುರದಿಂದಿದ್ದೇವೆ. ಇದು ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಸಂಭ್ರಮದ ಪುನರ್ಮಿಲನವಾಗಿದೆ. ಮುಂಬೈ ಇಂಡಿಯನ್ಸ್‌ಗೆ ಭವಿಷ್ಯದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.