26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಾರ್ದಿಕ್ ಪಾಂಡ್ಯ – ನೀತಾ ಅಂಬಾನಿ ಭೇಟಿ

Public TV
2 Min Read
hardik pandya

ಲಂಡನ್: ಟೀಂ ಇಂಡಿಯಾದ ಆಲ್‍ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ 26ನೇ ವಂಸತಕ್ಕೆ ಕಾಲಿಟಿದ್ದು, ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಪಾಂಡ್ಯ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಫೀಲ್ಡ್ ಅಲ್ಲಿ ಮಿಂಚಲಿ ಎಂದು ಸಹ ಆಟಗಾರರು ಹಾಗೂ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಬೆನ್ನು ನೋವಿಗೊಳಗಾಗಿರುವ ಹಾರ್ದಿಕ್ ಪಾಂಡ್ಯ ಲಂಡನ್‍ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಇದೀಗ ನಿಧಾನವಾಗಿ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ನಡೆದಾಟವನ್ನು ಆರಂಭಿಸಿದ್ದಾರೆ. ಇತ್ತೀಚಿನ ಟೀಂ ಇಂಡಿಯಾ ಪಂದ್ಯಗಳಲ್ಲಿ ಕಾಣದ ಹಾರ್ದಿಕ್‍ನನ್ನು ಅಭಿಮಾನಿಗಳು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗಿ ಎಂದು ಹಾರೈಸಿದ್ದಾರೆ. ಜೊತೆಗೆ ಟೀಂ ಇಂಡಿಯಾ ಆಟಗಾರರಾದ ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್ ಹಾಗೂ ಇತರರು ಬರ್ತ್‍ಡೇ ಬಾಯ್‍ಗೆ ವಿಷ್ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಹಾರ್ದಿಕ್ ಪಾಂಡ್ಯ ಪ್ರತಿಭೆಯನ್ನು ಗುರುತಿಸಲಾಗಿತ್ತು. ಹೀಗಾಗಿ ತಮ್ಮ ನೆಚ್ಚಿನ ಆಟಗಾರನಿಗೆ ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಷ್ ಮಾಡಿ ಪೋಸ್ಟ್ ಹಾಕಲಾಗಿದೆ. ಈ ನಡುವೆ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಒಡತಿ ನೀತಾ ಅಂಬಾನಿ ಅವರು ಲಂಡನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾರ್ದಿಕ್‍ರನ್ನು ಭೇಟಿಯಾಗಿ ಬೇಗನೇ ಫಿಟ್ ಆಗುವಂತೆ ಹಾರೈಸಿದ್ದಾರೆ. ನೀವು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ಧನ್ಯವಾದ ಬಾಬಿ ಎಂದು ಬರೆದು ನೀತಾ ಅಂಬಾನಿ ಜೊತೆಗಿನ ಫೋಟೋವನ್ನು ಹಾರ್ದಿಕ್ ಇನ್‍ಸ್ಟಾಗ್ರಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

https://www.instagram.com/p/B3btFpHFT1G/

ಏಕದಿನ ವಿಶ್ವಕಪ್ ಮುನ್ನವೇ ಹಾರ್ದಿಕ್‍ಗೆ ಗಾಯದ ಸಮಸ್ಯೆ ಕಾಣಿಸಿತ್ತು. ಬಳಿಕ ಐಪಿಎಲ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಭಾಗವಹಿಸಿದ್ದರೂ ಗಾಯದ ಸಮಸ್ಯೆ ಬೆನ್ನು ಬಿಡದೇ ಕಾಡಿತ್ತು. ಇದರಿಂದಾಗಿ ಶಸ್ತ್ರಚಿತಿತ್ಸೆಗೊಳಗಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕೊನೆಯದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಭಾಗವಹಿಸಿದ್ದರು. ಇದೀಗ ಎರಡರಿಂದ ಐದು ತಿಂಗಳುಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಮುಂಬರುವ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಸೋಮವಾರ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆಗ ಹಾರ್ದಿಕ್ ಪಾಂಡ್ಯ ವಿಡಿಯೋ ಅಪ್ಲೋಡ್ ಮಾಡಿಕೊಂಡು, ಹುಟ್ಟು ಹಬ್ಬದ ಶುಭಾಶಯಗಳು ಜಹೀರ್ ಖಾನ್. ನಾನು ಈ ವಿಡಿಯೋದಲ್ಲಿ ಮಾಡಿದಂತೆ ನೀವೂ ಹೀಗೆ ಮಾಡುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಬರೆದುಕೊಂಡಿದ್ದರು. ಹಾರ್ದಿಕ್ ಶುಭಾಶಯಕ್ಕೆ ಜಹೀರ್ ಖಾನ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗರಂ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕಟು ಪದಗಳಿಂದ ಟೀಕಿಸಿದ್ದರು. ಹಲವರು ನಯವಾದ ಮಾತುಗಳಿಂದಲೇ ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *