ಬೆಂಗಳೂರು: ನಗರದ ಸಂಚಾರಿ ಪೊಲೀಸರ (Traffic Police) ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸಂಚಾರಿ ಪೊಲೀಸರ ಗ್ರೂಪ್‍ನಲ್ಲಿ ಚರ್ಚೆ ಆಗಿರುವ ಮೇಸೆಜ್‍ಗಳಿಂದ ರಿವೀಲ್ ಆಗಿದೆ. ಹಿರಿಯ ಅಧಿಕಾರಿಗಳ ದಬ್ಬಾಳಿಕೆ ಬಗ್ಗೆ ಕಿರಿಯ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ (Cubban Park Police Station) ಸಂಚಾರಿ ಪೊಲೀಸರ ವಾಟ್ಸಾಪ್ ಗ್ರೂಪ್‍ನಲ್ಲಿ (Whatsapp Group) ಎಎಸ್‍ಐಗಳ ದಬ್ಬಾಳಿಕೆ ಬಗ್ಗೆ ಕಿರಿಯ ಸಹೋದ್ಯೋಗಿಗಳು ಅಸಮಾಧಾನ ಹೊರಹಾಕಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಎಎಸ್‍ಐಗಳಿಗೆ ಲಂಗು ಲಗಾಮು ಇಲ್ಲ. ಎಸ್‍ಐಗಳು ಠಾಣೆಗಳನ್ನು ತಾವೇ ಬರೆಸಿಕೊಂಡವಂತೆ ನಡೆದುಕೊಳುತ್ತಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದೇವೆ: ಬೊಮ್ಮಾಯಿ
Advertisement
Advertisement
ನಾವುಗಳು ಸ್ವಲ್ಪ ತಡವಾಗಿ ಠಾಣೆಗೆ ಬಂದರೆ ಡೈರಿ ಬರೆಸಿಕೊಳ್ಳುತ್ತಾರೆ. ಅವರು ಮಾತ್ರ ಬೇಕಾಬಿಟ್ಟಿಯಾಗಿ ಬರುತ್ತಾರೆ. ಕೆಲಸದ ಸಮಯದಲ್ಲಿ ನಾವು ಒಂದು ಕೇಸ್ ಹಾಕುವುದಕ್ಕೆ ಹೋದರೆ ಸೈಡಿಗೆ ಕಳಿಸಿಕೊಡುತ್ತಾರೆ. ಎಎಸ್‍ಐಗಳು ಸತ್ಯ ಹರಿಶ್ಚಂದ್ರರ ತುಂಡುಗಳ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಇದು ಇಲ್ಲಿಗೆ ನಿಲ್ಲಬೇಕೆಂದು ಕಿರಿಯ ಸಹೋದ್ಯೋಗಿಗಳು ವಾಟ್ಸಾಪ್ ಗ್ರೂಪ್‍ನಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: 8 ವರ್ಷದ ಸುದೀರ್ಘ ಪಯಣ ಕೊನೆಗೊಳಿಸಿದ ಮಂಗಳಯಾನ