Bengaluru CityDistrictsKarnatakaLatestLeading NewsMain Post

ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದೇವೆ: ಬೊಮ್ಮಾಯಿ

ಬೆಂಗಳೂರು: ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು.

ಗಾಂಧಿಯವರ ಆತ್ಮಕಥೆ ಎರಡನೇ ಸಾರಿ ಓದುತ್ತಿದ್ದೇನೆ. ಅವರು ಹೇಳಿದ ವಿಚಾರ ನನ್ನ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ಸ್ವಾರ್ಥಕ್ಕೆ ಸುಳ್ಳು ಹೇಳುವ ಕೆಲಸ ಮಾಡುತ್ತೇವೆ. ಅನಾವಶ್ಯಕ ಸುಳ್ಳುಗಳನ್ನು ಹೇಳುತ್ತಿದ್ದೇವೆ. ಅನಾವಶ್ಯಕ ಸುಳ್ಳುಗಳನ್ನ ನಾವು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು. ಆದರೆ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಕಷ್ಟ. ಅಹಿಂಸೆ ಮೂಲಕ ಸ್ವಾತಂತ್ರ್ಯವನ್ನು ಗಾಂಧೀಜಿ ತಂದುಕೊಟ್ಟರು. ಇದು ಮಹಾತ್ಮ ಗಾಂಧಿಯವರ ಶಕ್ತಿಯಾಗಿತ್ತು. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಎಲ್ಲದ್ದಕ್ಕೂ ಗಾಂಧಿ ವಿಚಾರಗಳು ಈಗಲೂ ಪ್ರಸ್ತುತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಏನೇನು ಸಹಕಾರ ಬೇಕೋ ನೀಡುತ್ತೇವೆ. ಆರ್ಥಿಕವಾಗಿ ಸಹಕಾರ, ಜಾಗ ಒದಗಿಸುವುದು ಸೇರಿದಂತೆ ಎಲ್ಲ ನೆರವನ್ನು ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ 2022ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಡಾ.ಸಿ.ಆರ್. ಚಂದ್ರಶೇಖರ್ ಅವರಿಗೆ ನೀಡಿದರೆ ಜಯಶ್ರೀ ಟ್ರಸ್ಟ್ ನ ಕೆ.ಆರ್.ಸಂಧ್ಯಾ ರೆಡ್ಡಿ  ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

Live Tv

Leave a Reply

Your email address will not be published. Required fields are marked *

Back to top button