ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಡಲಾಗಿದೆ.
Advertisement
ಡ್ಯಾಂನ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ನೀರನ್ನು ಹರಿಸಲಾಗುತ್ತಿದ್ದು ಹಾರಂಗಿ ಮೂಲಕ ಈ ನೀರು ಕೆಆರ್‍ಎಸ್ ಗೆ ಸೇರಲಿದೆ. 2859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2855.91 ಅ ಡಿ ನೀರು ಸಂಗ್ರಹವಾಗಿದ್ದು, ಸುಮಾರು 7,042 ಸಾವಿರ ಕ್ಯೂಸೆಕ್ ನೀರಿ ಒಳಹರಿವು ಇರುವುದರಿಂದ ಇಂದಿನಿಂದ ನೀರನ್ನು ಹರಿಯಬಿಡಲಾಗಿದೆ.
Advertisement
ಕೇವಲ ಒಂದು ತಿಂಗಳ ಹಿಂದೆ ಬರಿದಾಗಿ ಬಣಗುಡುತ್ತಿದ್ದ 8 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯ ಭರ್ತಿಯಾಗಿರೋದು ಇದರಿಂದ ಹರಿಸಲಾಗಿರುವ ನೀರು ಕೆಆರ್‍ಎಸ್ ಸೇರಲಿದೆ.
Advertisement
Advertisement