‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸುದೀಪ್ ಅವರು ಜಬರ್ದಸ್ತ್ ಆಗಿ ಹೆಜ್ಜೆ ಹಾಕುತ್ತಾ ಫಿನಾಲೆಯಲ್ಲಿ ರಂಜಿಸಿದ್ದಾರೆ. ಇದೆಲ್ಲದರ ನಡುವೆ ಫಿನಾಲೆಯಲ್ಲಿ ಹನುಮಂತನ ಮದುವೆ ಬಗ್ಗೆ ಅವರ ಪೋಷಕರ ಬಳಿ ಸುದೀಪ್ ಪ್ರಸ್ತಾಪಿಸಿದ್ದಾರೆ. ಅದಷ್ಟೇ ಅಲ್ಲ, ಹನುಮಂತ (Hanumantha) ಮೆಚ್ಚಿದ ಹುಡುಗಿ ಜೊತೆ ಮದುವೆ ಮಾಡಿಸಲು ಕುಟುಂಬಸ್ಥರಿಂದ ಗ್ರೀನ್ ಸಿಗ್ನಲ್ ಕೊಡಿಸಿದ್ದಾರೆ. ಸುದೀಪ್ ಮಾತಿಗೆ ಮರುಮಾತನಾಡದೇ ಹನುಮಂತನ ಪೋಷಕರು ಓಕೆ ಎಂದಿದ್ದಾರೆ.
Advertisement
ಫಿನಾಲೆಗೆ ‘ಮ್ಯಾಕ್ಸ್’ ಹಾಡಿಗೆ ಸುದೀಪ್ ಹೆಜ್ಜೆ ಹಾಕಿದ ಬಳಿಕ ಈ ಸೀಸನ್ ದಾಟದೇ ಇರೋವಂತಹ ದಾಖಲೆಗಳಿಲ್ಲ. ಮುಟ್ಟದೇ ಇರೋವಂತ ಮೈಲಿಗಲ್ಲುಗಳಿಲ್ಲ ಎನ್ನುತ್ತಾ ‘ಬಿಗ್ ಬಾಸ್’ ಫಿನಾಲೆಗೆ ಸ್ವಾಗತ ಕೋರಿದ್ದಾರೆ ಸುದೀಪ್. ಟಾಪ್ 6 ಸ್ಪರ್ಧಿಗಳನ್ನು ನಟ ಮಾತನಾಡಿಸಿದ ಬಳಿಕ ಹನುಮಂತನ ಮದುವೆ ಬಗ್ಗೆ ಸುದೀಪ್ (Sudeep) ವೇದಿಕೆಯಲ್ಲಿ ಚರ್ಚಿಸಿದ್ದಾರೆ. ಇದನ್ನೂ ಓದಿ:ಕೋರ್ಟ್ನಿಂದ ರಿಲೀಫ್ ಸಿಕ್ಕಿದ ಬೆನ್ನಲ್ಲೇ ಶಿರಡಿಗೆ ತೆರಳಿದ ಪವಿತ್ರಾ ಗೌಡ
Advertisement
Advertisement
ನೀವು ಫಿನಾಲೆ ಹಂತಕ್ಕೆ ಬಂದಿದ್ದೀರಾ, ನಿಮ್ಮ ಹುಡುಗಿಗೆ ಎಷ್ಟು ಖುಷಿ ಆಗಿರಬೇಕಲ್ವಾ? ಎಂದು ಹನುಮಂತಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಕಿಚ್ಚನ ಮಾತಿಗೆ ಅವರು ನಾಚಿ ನೀರಾಗಿದ್ದಾರೆ. ಬಳಿಕ ಏನು ಅಮ್ಮಾ, ಹನುಮಂತ ಸೆಲೆಕ್ಟ್ ಮಾಡಿರುವ ಹುಡುಗಿ ನಿಮಗೆ ಒಪ್ಪಿಗೆ ಅಲ್ವಾ? ಎಂದ ಸುದೀಪ್ಗೆ ನಾವಿನ್ನು ಹುಡುಗಿಯನ್ನು ನೋಡಿಲ್ಲ ಎಂದು ಪೋಷಕರು ಉತ್ತರಿಸಿದ್ದಾರೆ. ಈಗ ಅವರು ಮದುವೆಗೆ ಹೆಣ್ಣನ್ನು ನೋಡಿದ್ದಾರೆ. ನೀವು ಹೀಗೆ ಗಲಾಟೆ ಮಾಡ್ತಿದ್ರೆ ಯಾವುದಾದರೂ ಗಂಡು ಹುಡುಗನನ್ನು ನೋಡುತ್ತಾರೆ ಎಂದು ಹನುಮಂತನ ತಾಯಿಯ ಕಾಲೆಳೆದಿದ್ದಾರೆ ಕಿಚ್ಚ.
Advertisement
ಆ ಹುಡುಗಿ ಚೆನ್ನಾಗಿದ್ದಾರೆ ಓಕೆ ಅಂತ್ಹೇಳಿ ಎಂದು ಹನುಮಂತನ ತಾಯಿಗೆ ಹೇಳಿದ್ದಾರೆ. ಆಯ್ತು ನಿಮಗೆ ಓಕೆ ಅಂದ್ರೆ ನಮಗೂ ಓಕೆ ಎಂದು ಸುದೀಪ್ ಮಾತಿಗೆ ಮರುಮಾತನಾಡದೇ ಹನುಮಂತನ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮೂಲಕ ಪೋಷಕರಿಂದ ಹನುಮಂತನ ಮದುವೆಗೆ ಸಮ್ಮತಿ ಸೂಚಿಸುವಂತೆ ಸುದೀಪ್ ಮಾಡಿಸಿದ್ದಾರೆ. ಇದು ಹನುಮಂತಗೆ ಖುಷಿ ಕೊಟ್ಟಿದೆ.