– ರೊಟ್ಟಿ ಇಲ್ಲದೇ ತಲೆಯೇ ಆಪ್ ಆಗಿತ್ತು; ಬಿಗ್ ಬಾಸ್ ಮನೆ ಕಷ್ಟ ಇತ್ತು
– ಬಿಗ್ ಬಾಸ್ ಮನೆಯಲ್ಲಿ ಜೀವನದ ಪಾಠ ಇದೆ
ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ವಿನ್ನರ್ ಆಗಿರುವ ಹನುಮಂತ (Hanumantha) ಅವರು ದೊಡ್ಮನೆ ಬಗ್ಗೆ ಹಲವು ವಿಚಾರಗಳನ್ನು ‘ಪಬ್ಲಿಕ್ ಟಿವಿ’ ಜೊತೆಗೆ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಶೋ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ. ಆ ಕನಸೂ ಇರಲಿಲ್ಲ. ಹೋದೆ, ನನ್ನ ಪಾಡಿಗೆ ನಾನು ಆಟ ಆಡಿದೆ. ನಾನು ಜಾಸ್ತಿ ಮಾತನಾಡಲ್ಲ. ನನ್ನಷ್ಟಕ್ಕೆ ನಾನು ಆಟ ಆಡಿದೆ ಅಷ್ಟೆ ಎಂದು ಹನುಮಂತ ತಿಳಿಸಿದರು. ಇದನ್ನೂ ಓದಿ: ’ಬಿಗ್ ಬಾಸ್’ ಗೆಲ್ಲುತ್ತೇನೆ ಎಂದಿದ್ದ ಗೆದ್ದೇ ಬಿಟ್ಟ: ಹನುಮಂತನ ತಾಯಿ ಸಂತಸ
ವೈಟ್ ಕಾರ್ಡ್, ಪೈಟ್ ಕಾರ್ಡ್ ಅಂತ ಗೊತ್ತಿಲ್ಲ. ಅದು ತಲೆಯಲ್ಲೇ ಇರಲಿಲ್ಲ. ‘ಸುದೀಪ್ ಸರ್ ಇದೇ ಸೀಸನ್ ಲಾಸ್ಟ್ ಅಂತ ಬರೆದುಕೊಂಡಿದ್ದಾರೆ. ಒಮ್ಮೆ ಹೋಗಿ ಬಾ’ ಅಂತ ಸ್ನೇಹಿತರು ಒತ್ತಾಯಿಸಿದ್ದರು. ಕಳೆದ ಎರಡ್ಮೂರು ಸೀಸನ್‌ನಿಂದಲೂ ನನಗೆ ಕರೆ ಬರುತ್ತಿತ್ತು. ಶೋ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದಕ್ಕೆ ಬರೋದಿಲ್ಲ ಅಂತ ಆಗ ಹೇಳಿದ್ದೆ. ಈ ಸಲ ನನ್ನ ಸ್ನೇಹಿತರ ಒತ್ತಾಯಕ್ಕೆ ಬಂದಿದ್ದೆ. ಶೋಗೆ ಅರ್ಧಕ್ಕೆ ಹೋದರೂ ನನಗೆ ಬಹಳ ಖುಷಿಯಾಯಿತು ಎಂದರು.
ಅಲ್ಲಿ ರೊಟ್ಟಿ ಸಿಗುತ್ತಿರಲಿಲ್ಲ. ಅದೊಂದು ತಲೆನೋವಾಗಿತ್ತು ನನಗೆ. ಬರೀ ಚಪಾತಿ, ಅನ್ನ-ಸಾರು ತಿನ್ನುವ ಪರಿಸ್ಥಿತಿ ಇತ್ತು. ಚಿಕನ್ ಎಲ್ಲಾ ಬರ್ತಿತ್ತು. ಅದನ್ನು ತಿನ್ನುತ್ತಿದ್ದೆವು. ಆದರೆ, ಅವ್ವ-ಅಪ್ಪ ತಂದ ರೊಟ್ಟಿಯನ್ನು ಎಲ್ಲರೂ ಖುಷಿಯಿಂದ ತಿಂದರು. ಶೇಂಗಾ ಚಟ್ನಿ, ಕಾಳಿನ ಪಲ್ಯ ಎಲ್ಲವನ್ನೂ ಮಾಡಿಕೊಂಡು ಬಂದಿದ್ದರು. ಬಹಳ ಖುಷಿಯಾಯಿತು. ಎಲ್ಲರೂ ಖುಷಿಯಾದರು ಎಂದು ಹೇಳಿದರು. ಇದನ್ನೂ ಓದಿ: ಮಗನ ಮದುವೆಗೆ ಸುದೀಪ್ ಸರ್‌ನ ಕರೆಯುತ್ತೇವೆ: ಹನುಮಂತ ತಂದೆ ರಿಯಾಕ್ಷನ್
ರೊಟ್ಟಿ ಇಲ್ಲದೇ ತಲೆ ಆಪ್ ಆಗಿತ್ತಣ್ಣೊ. ಒಮ್ಮೊಮ್ಮೆ ಊಟದ ಸಂಬಂಧ ಬೇಜಾರಾಗಿತ್ತು. ರೊಟ್ಟಿ ತಿನ್ನುವ ನಮಗೆ ಚಪಾತಿ ಅಷ್ಟು ಒಗ್ಗಲ್ಲ. ನಮಗೆ ರೊಟ್ಟಿ-ಖಾರ ಇದ್ದರೆ ಸಾಕು. ಅಲ್ಲಿನ ಎಸಿ ಕೂಟ ಆಗುತ್ತಿರಲಿಲ್ಲ. ಬಿಗ್ ಬಾಸ್ ಮನೆ ಕಷ್ಟ. ಆದರೆ, ಈಗ ನನಗೆ ಅನಿಸುತ್ತಿದೆ. ಬಿಗ್ ಬಾಸ್ ಮನೆ ಮಿಸ್ ಮಾಡ್ಕೊತ್ತಿದ್ದೀನಿ ಅಂತ. ಅಲ್ಲಿ ಕಲಿಯುವಂತಹದ್ದು ಬಹಳ ಇದೆ. ಅಲ್ಲಿ ಹೋದರೆ ಏನೈತೆ ಅಂತ ಎಲ್ಲರೂ ಕೇಳ್ತಾರೆ. ಅಲ್ಲಿ ಜೀವನದ ಪಾಠ ಇದೆ ಎಂದರು.