ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದ ಸ್ಪರ್ಧಿ ಆಗಿರುವ ಕುರಿಗಾಹಿ ಹನುಮಂತ ದಾಖಲೆ ಮಾಡಿದ್ದಾರೆ.
ಸರಿಗಮಪ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳಿಗೆ ವಾರಕ್ಕೆ ಇಂತಿಷ್ಟು ಹಣವನ್ನು ಸಂಭಾವನೆಯಾಗಿ ನೀಡುತ್ತಾರೆ. ಅದೇ ರೀತಿ ಹನುಮಂತ ಅವರಿಗೆ 10 ಸಾವಿರ ರೂ.ಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅವರ ಸಂಭಾವನೆ 25 ರಿಂದ 30 ಸಾವಿರಕ್ಕೆ ಏರಿಕೆಯಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದನ್ನೂ ಓದಿ: ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ
Advertisement
Advertisement
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬುಡ್ನಿ ತಾಂಡಾದಲ್ಲಿದ್ದ ಹನುಮಂತ ಗಾನ ಪ್ರತಿಭೆಗೆ ಖುದ್ದು ಹಂಸಲೇಖ ಬೆರಗಾಗಿದ್ದರು. ಅಲ್ಲದೇ ಜನಪದ ಕಲೆಯನ್ನು ಉಳಿಸುವ ಕಲಾವಿದ ನೀನೆಂದು ಹನುಮಂತನಿಗೆ ಹರಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಸಿನಿಮಾ ಮಂದಿ ಹನುಮಂತನಿಗೆ ಅವಕಾಶ ಕೊಡುವುದಾಗಿ ಹೇಳಿದರು. ಅದೇ ರೀತಿ ಯೋಗರಾಜ್ ಭಟ್ ಅವರು ಕೂಡ `ನಮ್ ಬಯಲು ಸೀಮೆ ಕಡೆ ಹುಡುಗ. ನನ್ ಸಿನ್ಮಾದಲ್ಲಿ ಹಾಡಿಸ್ತಿನಿ’ ಎಂದು ಹೇಳಿ ಹನುಮಂತನಿಗೆ ಅವಕಾಶ ನೀಡಿದ್ದರು. ಇದನ್ನೂ ಓದಿ: ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ
Advertisement
Advertisement
ಯೋಗರಾಜ್ ಭಟ್ ಕೂಡ ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ. ಯೋಗರಾಜ್ ಭಟ್ ಅವರಿಗೆ ಸಂಗೀತ ಅಂದರೆ ದೇವರ ಸಮಾನ. ಆದ್ದರಿಂದ ಸಂಗೀತ ಪ್ರಿಯರನ್ನು ಗೌರವಿಸುವ ಭಟ್ರು ಹನುಮಂತನ ಕಂಠಕ್ಕೆ ಸೂಕ್ತ ಬಹುಮಾನ ಕೊಡುವುದಕ್ಕೆ ಮನಸ್ಸು ಮಾಡಿದ್ದರು. ಯೋಗರಾಜ್ ಅವರು ಹನುಮಂತ ಹಾಡುವುದಕ್ಕೆ ಸುಲಭವಾಗುವ ಪದದಲ್ಲಿ ತಾವೇ ಸಾಹಿತ್ಯ ಬರೆಯೋಕೆ ಸಿದ್ಧರಾಗಿದ್ದರು. ಸರಿಗಮಪ ಕಾರ್ಯಕ್ರಮದ ಜಡ್ಜ್ ಆಗಿರುವ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬರಲಿದೆ. ಇದನ್ನೂ ಓದಿ: ಓದಿಲ್ಲ, ಸಂಗೀತ ತರಬೇತಿ ಪಡೆದಿಲ್ಲ, ಕುರಿ ಮೇಯಿಸುತ್ತಾ ಸರಿಗಮಪ ವೇದಿಕೆಯೇರಿದ ಹನುಮಂತನ ಕಥೆ
ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹನುಮಂತ ಸ್ಟಾರ್ ಸಿಂಗರ್ ಆಗಿದ್ದಾರೆ. ಶನಿವಾರ ಉಳಿದೆಲ್ಲ ಗಾಯಕರೂ ಹಾಡುತ್ತಾರೆ. ಆದರೆ ಹನುನಂತನ ಭಾನುವಾರ ಹಾಡುತ್ತಾರೆ. ಹಾಗಾಗಿ ಪ್ರೇಕ್ಷಕರು ಹನುಮಂತ ಹಾಡನ್ನು ಕೇಳಲು ಭಾನುವಾರ ರಾತ್ರಿವರೆಗೆ ಕಾಯುತ್ತಾರೆ. ಹನುಮಂತ ಹಾಡಿಗೆ ಪ್ರೇಕ್ಷಕರಲ್ಲದೇ ತೀರ್ಪುಗಾರರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ಮಹಾಗುರು ನಾದಬ್ರಹ್ಮ ಹಂಸಲೇಖ ಅವರು ಮನ ಸೋತಿದ್ದಾರೆ.
ಈ ಹಿಂದೆ ವಾಹಿನಿ ಹನುಮಂತನಿಗೆ ಒಂದು ಸರ್ಪ್ರೈಸ್ ನೀಡಿತ್ತು. ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದರು. ಖಾಸಗಿ ವಾಹಿನಿಯಲ್ಲಿ `ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿತ್ತು. ಈ ಸಂದರ್ಭದಲ್ಲಿ ಹನುಮಂತ ಪ್ರಶಸ್ತಿಯನ್ನು ಸ್ವೀಕರಿಸಿ ಆನಂದಭಾಷ್ಪ ಸುರಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv