‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇದೀಗ ಭಾನುವಾರ ಎಪಿಸೋಡ್‌ನಲ್ಲಿ ಹನುಮಂತ (Hanumantha) ಮತ್ತು ಧನರಾಜ್ (Dhanraj) ಫುಲ್ ಟ್ರೋಲ್ ಆಗಿರೋದನ್ನು ತೋರಿಸಿ ಸುದೀಪ್ (Sudeep) ಕಾಲೆಳೆದಿದ್ದಾರೆ. ಪತಿ ಜೊತೆ ಗೌತಮಿ ಇರುವಾಗ ಕದ್ದು ನೋಡಿದ್ದರ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ. ಈ ಕುರಿತು ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.
ಗೌತಮಿ ದಂಪತಿಯನ್ನು ಹನುಮಂತ ಮತ್ತು ಧನರಾಜ್ ನೋಡುತ್ತಿದ್ದ ರೀತಿಗೆ ಸುದೀಪ್ ಸಖತ್ ಆಗಿ ಕಾಲೆಳೆದಿದ್ದಾರೆ. ಅವರ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಅವರ ವಿಡಿಯೋಗಳನ್ನು ಬಿಗ್ ಬಾಸ್‌ನಲ್ಲಿ ಪ್ಲೇ ಮಾಡಿಸಿದ್ದಾರೆ.
ಫ್ಯಾಮಿಲಿ ರೌಂಡ್ ವೇಳೆ, ಗೌತಮಿ ದಂಪತಿ ‘ಬಿಗ್ ಬಾಸ್’ನಲ್ಲಿ ಮದುವೆ ಆ್ಯನಿವರ್ಸರಿ ಆಚರಿಸುವ ಅವಕಾಶ ಸಿಕ್ಕಿತ್ತು. ಈ ವೇಳೆ, ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಆಗ ರೂಮ್‌ನಿಂದ ಹೊರಗೆ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕುತೂಹಲ ಇತ್ತು ಎಂದು ಕೇಳಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.
ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ನಿರೀಕ್ಷೆ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್ ಎನ್ನುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಒಂದು ವೇಳೆ, ನೀವಿಬ್ಬರು ನೋಡುವಾಗ ಏನಾದರೂ ಕಂಟೆಂಟ್ ಸಿಕ್ಕಿದ್ದರೇ ಆಗಿದ್ದಲ್ಲಿ ಏನ್ ಮಾಡುತ್ತಿದ್ದೀರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದನ್ನೇ ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ. ಧನರಾಜ್ ಮಾತಿಗೆ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ.