ಬೆಂಗಳೂರು: ಅಕ್ರಮವಾಗಿ ಪೆಂಗೋಲಿಯನ್ (Pangolin) ಪ್ರಾಣಿಯನ್ನ ಬೇಟೆಯಾಡಿ ಅದರ ಚಿಪ್ಪುಗಳನ್ನ ಬೇರ್ಪಡಿಸಿ ಅದನ್ನ ಹೊರ ದೇಶಗಳಿಗೆ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನ ಹನುಮಂತನಗರ ಪೊಲೀಸ (Hanumanthanagar Police) ರು ಪತ್ತೆ ಹಚ್ಚಿ ಜೈಲಿಗೆ ಹಾಕಿದ್ದಾರೆ.
Advertisement
ಹೌದು. ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ವಾಸ ಮಾಡೋ ಪೆಂಗೋಲಿಯನ್ ಪ್ರಾಣಿಯನ್ನ ಬೇಟೆಯಾಡಿ ಅದರ ಚಿಪ್ಪಿನಲ್ಲಿ ಮೆಡಿಸನ್ ಹಾಗೂ ಉಡುಪುಗಳನ್ನ ತಯಾರಿಸಲು ಹೊರ ದೇಶಗಳಿಗೆ ಸಾಗಾಟ ಮಾಡಲಾಗಿತ್ತು. ಇದನ್ನೂ ಓದಿ: ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!
Advertisement
Advertisement
ಹನುಮಂತನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ ಮಾಡಿದ್ದು, ಬಂಧಿತ ಆರೋಪಿ ಕಿರಣ್ ಎಂದು ತಿಳಿದುಬಂದಿದೆ. ಬಂಧಿತರಿಂದ 30 ಕೆ.ಜಿ ಪೆಂಗೋಲಿಯನ್ ಚಿಪ್ಪು ವಶಕ್ಕೆ ಪಡೆದಿದ್ದು, ಔಷಧಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಈ ಪೆಂಗೋಲಿಯನ್ ಚಿಪ್ಪು ಬಳಸಲಾಗುತ್ತೆ ಅನ್ನೋ ಮಾಹಿತಿಯನ್ನ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
Advertisement
ಒಂದು ಕೆಜಿ ಪೆಂಗೋಲಿಯನ್ ಚಿಪ್ಪು 90 ಸಾವಿರ ಬೆಲೆ ಬಾಳುತ್ತೆ. ಆರೋಪಿ ಕಿರಣ್ ಬಳಿ 25 ರಿಂದ 30 ಲಕ್ಷ ಬೆಲೆಬಾಳುವ 30 ಕೆಜಿ ಚಿಪ್ಪು ವಶಕ್ಕೆ ಪಡೆಯಲಾಗಿದೆ. ಸುಮಾರು 25 ಕ್ಕೂ ಅಧಿಕ ಪೆಂಗೋಲಿಯನ್ ಗಳನ್ನ ಕೊಂದು ಚಿಪ್ಪು ಸಂಗ್ರಹಣೆ ಮಾಡಬೇಕಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿ ಬಂಧಿಸಿದ್ದು, ಹನುಮಂತ ನಗರ ಪೊಲೀಸರಿಂದ ಹೆಚ್ಚಿನ ತನಿಖೆ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k