ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಚಿನ್ ತೆಂಡೂಲ್ಕರ್ ಜೊತೆಗಿನ ವಿಶೇಷ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಚಿತ್ರಕ್ಕೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಸೆಹ್ವಾಗ್, ಸಚಿನ್ ಅವರ ಮುಂದೇ ಮಂಡಿಯೂರಿ ಹನುಮಂತನಂತೆ ಕುಳಿತ್ತಿದ್ದು, ಸಚಿನ್ ರಾಮನಂತೆ ನಿಂತಿದ್ದಾರೆ. ಈ ಚಿತ್ರವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಇಬ್ಬರ ನಡುವಿನ ಬಾಂಧವ್ಯ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
When with God ji @sachin_rt ,best to be at His feet. #HammerNahiGadaHai #RamjiHanumanji pic.twitter.com/CJCeH11Hd8
— Virender Sehwag (@virendersehwag) June 10, 2018
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್, ಸೆಹ್ವಾಗ್ ಕುರಿತ ಹಲವು ವಿಷಯಗಳನ್ನು ಬಹಿರಂಗ ಪಡಿಸಿದ್ದರು. ಮುಖ್ಯವಾಗಿ ಸೆಹ್ವಾಗ್ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಮ್ಮೊಂದಿಗೆ ಮಾತನಾಡುತ್ತಲೇ ಇರಲಿಲ್ಲ. ಜೊತೆಯಲ್ಲೇ ಇನ್ನಿಂಗ್ ಆರಂಭಿಸಿದರು ಸಹ ಮಾತನಾಡುತ್ತಿರಲಿಲ್ಲ. ಬಳಿಕ ತಾವೇ ಮಾತನಾಡಲು ಮುಂದಾಗಿದ್ದಾಗಿ ತಿಳಿಸಿದ್ದರು.
ಸೆಹ್ವಾಗ್ ರನ್ನು ಮಾತನಾಡಿಸಲು ಮುಂದಾದ ವೇಳೆ ಸಚಿನ್ ಪಂದ್ಯದ ಮೊದಲು ಊಟಕ್ಕೆ ಆಹ್ವಾನಿಸಿದ್ದು, ಈ ವೇಳೆ ಸೆಹ್ವಾಗ್ ತಾವು ಸಸ್ಯಾಹಾರಿ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ ಏಕೆ ಮಾಂಸ ಸೇವನೆ ಮಾಡುವುದಿಲ್ಲ ಎಂಬ ಮರುಪ್ರಶ್ನೆಗೆ ಉತ್ತರಿಸಿ ಮನೆಯಲ್ಲಿ ಚಿಕನ್ ಸೇವಿಸಿದರೆ ದಪ್ಪವಾಗುವುದಾಗಿ ಹೇಳಿದ್ದಾರೆ. ಅದ್ದರಿಂದ ತಾವು ಮಾಂಸ ಆಹಾರ ಸೇವಿಸುವುದಿಲ್ಲ ಎನ್ನುವ ಉತ್ತರವನ್ನು ಸೆಹ್ವಾಗ್ ನೀಡಿದ್ದರು ಎಂದು ಸಚಿನ್ ಹೇಳಿದರು.
ಮಾಜಿ ಆಟಗಾರರಾಗಿರುವ ಸೆಹ್ವಾಗ್ ಹಾಗೂ ಸಚಿನ್ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್ ಮನ್ ಗಳಾಗಿದ್ದು, ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕವೂ ಉತ್ತಮ ಸ್ನೇಹಿರಾಗಿ ಮುಂದುವರಿದಿದ್ದಾರೆ.