ಕೊಪ್ಪಳ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನೆಲೆಯಲ್ಲಿ ರಾಮ ಬಂಟ ಹನುಮಂತನ ಭೇಟಿ ಸ್ಥಳದಲ್ಲಿ ಮಂಗಳವಾರ (ಇಂದು) ಬೆಳ್ಳಂಬೆಳಗ್ಗೆ ಹನುಮಾನ್ ತಾಂಡವ್ (Hanuman Tandav) ಮಂತ್ರ ಪಠಣ ಮಾಡಲಾಯಿತು.
ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಪ್ರಸಿದ್ಧ ಪಂಪಾ ಸರೋವರದಲ್ಲಿ (Pampa Sarovar) ಸಾವಿರಾರು ತಾಯಂದಿರು ಸಮೂಹಿಕವಾಗಿ ಮಂತ್ರ ಪಠಣ ಮಾಡಿದರು.
Advertisement
Advertisement
ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶದಿಂದ ಆಗಮಿಸಿದ್ದ ಸಾವಿರಾರು ಮಾತೃಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀರಾಮ ತನ್ನ ಬಂಟ ಆಂಜನೇಯನನ್ನ ಭೇಟಿ ಮಾಡಿದ ಸ್ಥಳ ಎಂಬ ಪೌರಾಣಿಕ ಹಿನ್ನೆಲೆಯ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?
Advertisement
Advertisement
ಒಂದು ಸಾವಿರಕ್ಕೂ ಹೆಚ್ಚು ಮಾತೃಗಳು ಏಕಕಾಲಕ್ಕೆ ಹನುಮಾನ್ ತಾಂಡವ್ ಪಠಣ ಮಾಡಿದರು. ಪಂಪಾ ಸರೋವರದ ಕಲ್ಯಾಣಿಯಲ್ಲಿ ಸುತ್ತುವರಿದು ಶಿಸ್ತಿನಿಂದ ಕುಳಿತ ಮಹಿಳೆಯರು ದೀಪ ಹಚ್ಚಿ ಮಂತ್ರ ಪಠಿಸಿದರು. ಫೌಂಡೇಶನ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ ಸಂಸ್ಥೆ ಮಂತ್ರ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಕರ್ನಾಟಕದ 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಜೊತೆ ಭಾಗಿಯಾಗಿದ್ದರು. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ರಾತ್ರಿಯ ವಿಹಂಗಮ ನೋಟವನ್ನು ಚಿತ್ರಗಳಲ್ಲಿ ನೋಡಿ