ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ

Public TV
1 Min Read
Ganesh Hukkeri 1

ಚಿಕ್ಕೋಡಿ: ಹನುಮಂತನ ಜಯಂತಿ ಹಿನ್ನಲೆ ಶಾಸಕ ಗಣೇಶ್ ಹುಕ್ಕೇರಿಯವರು ತಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಜಿಲ್ಲೆಯಿಂದ ಚಿಕ್ಕೋಡಿ ತೋರಣಹಳ್ಳಿಯ ಹನುಮಂತನ ದೇವಸ್ಥಾನದವರೆಗೆ ಪಾದಯಾತ್ರೆ ಮಾಡಿದ್ದಾರೆ.

Ganesh Hukkeri

ರಾಮಭಕ್ತ, ಪವನ ಪುತ್ರ ಹನುಮಂತ ಜಯಂತಿ ಹಿನ್ನಲೆ ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಹನುಮಂತ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ಗಣೇಶ್ ಹುಕ್ಕೇರಿಯವರು ತಮ್ಮ ಅಪಾರವಾದ ಕಾರ್ಯಕರ್ತರ ಜೊತೆಗೆ ಚಿಕ್ಕೋಡಿಯ ಬಸವ ವೃತ್ತದಿಂದ ತೋರಣಹಳ್ಳಿಯ ಹನುಮಂತನ ದೇವಸ್ಥಾನವರೆ ಪಾದಯಾತ್ರೆ ಮಾಡಿ ಆಂಜನೇಯನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

Ganesh Hukkeri 3

ಪಾದಯಾತ್ರೆಯಲ್ಲಿ ಹನುಮಂತ ಭಕ್ತರು, ಗಣೇಶ್ ಹುಕ್ಕೇರಿ ಅವರ ಕಾರ್ಯಕರ್ತರು ಚಿಕ್ಕೋಡಿ ಪುರಸಭೆ ಸದಸ್ಯರು ಸೇರಿದಂತೆ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಜನರು ಭಾರೀ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಗಣೇಶ್ ಹುಕ್ಕೇರಿಯವರಿಗೆ ತೋರಣ ಹಳ್ಳಿಯ ಹನುಮಂತ ಎಂದರೆ ಅಪಾರವಾದ ಭಕ್ತಿ, ಶ್ರದ್ಧೆ. ಈ ಕಾರಣಕ್ಕಾಗಿ ಗಣೇಶ್ ಹುಕ್ಕೇರಿಯವರು ಇಲ್ಲಿನ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ದೇಣಿಗೆಯನ್ನು ನೀಡಿದ್ದಾರೆ.

Ganesh Hukkeri

ಪಾದಯಾತ್ರೆಯ ಉದ್ದಕೂ ಶ್ರೀರಾಮ ಜೈ…ಜೈ..ರಾಮ ಎನ್ನುವ ಘೋಷಣೆಗಳು ಮೊಳಗಿದವು. ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಸುಮಾರು 15 ಕಿ.ಮೀ. ವರೆಗೆ ಈ ಪಾದಯಾತ್ರೆ ನಡೆಯಿತು. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

Share This Article