ಬಿಜಿಲ್, ಹನುಮಾನ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಸೌತ್ ನಟಿ ಅಮೃತಾ ಅಯ್ಯರ್ (Amritha Aiyer) ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ.
ಬೆಂಗಳೂರಿನಲ್ಲೇ ಓದಿ ಬೆಳೆದಿರುವ ಅಮೃತಾ ಅಯ್ಯರ್ ತೆಲುಗು, ತಮಿಳಿನಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಈಗ ಗಣೇಶ್‌ಗೆ ನಾಯಕಿಯಾಗಿ ಕನ್ನಡದ ಸಿನಿಮಾಗೆ ಅವರು ಪಾದಾರ್ಪಣೆ ಮಾಡ್ತಿದ್ದಾರೆ. ‘ಲವ್ ಇನ್ ಮಂಡ್ಯ’ ಖ್ಯಾತಿಯ ನಿರ್ದೇಶಕ ಅರಸು ಅಂತಾರೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲೂ ಬಿಗ್ ಬಜೆಟ್ ಸಿನಿಮಾಗಳಿವೆ. ಸಾಲು ಸಾಲು ಸಿನಿಮಾಗಳು ಅವರು ಬ್ಯುಸಿಯಾಗಿದ್ದಾರೆ. ಇದರ ನಡುವೆ ಅರಸು ಅಂತಾರೆ ನಿರ್ದೇಶಕನ ಕಥೆ ಇಷ್ಟವಾಗಿ ಈ ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ದಿ ಡೆವಿಲ್’ ಚಿತ್ರದ ಶೂಟಿಂಗ್ ಶುರು- ದರ್ಶನ್ ಭಾಗಿ
ಫ್ಯಾಮಿಲಿ ಓರಿಯೆಂಟೆಡ್ ಕಥಾಹಂದರವಿರುವ ಚಿತ್ರವಾಗಿದೆ. ಇನ್ನೂ ಏ.6ರಂದು ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಏ.7ರಿಂದ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಈ ಸಿನಿಮಾದ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.
ದಕ್ಷಿಣದ ಸಿನಿಮಾಗಳಲ್ಲಿ ಮನೆ ಮಾತಾಗಿರುವ ಅಮೃತಾ ಅವರು ಕನ್ನಡದ ಮೊದಲ ಸಿನಿಮಾದಲ್ಲೇ ಗಣೇಶ್‌ಗೆ ಜೋಡಿಯಾಗಿ ಬರುತ್ತಿರೋದು, ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಎದುರು ನೋಡ್ತಿದ್ದಾರೆ.