ಲಂಡನ್: ಇಂಗ್ಲೆಂಡ್ ವಿರುದ್ಧ ಓವೆಲ್‍ನಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಹನುಮ ವಿಹಾರಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ 24 ವರ್ಷದ ಹನುಮ ವಿಹಾರಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದು ಟೀಂ ಇಂಡಿಯಾ 292ನೇ ಟೆಸ್ಟ್ ಆಟಗಾರರಾಗಿ ಪಾದಾರ್ಪಣೆ ಮಾಡಿದರು.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ವಿಹಾರಿ, ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಆದರೆ ಒಮ್ಮೆ ತಂಡದಲ್ಲಿ ಸ್ಥಾನ ಲಭಿಸಿದರೆ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಾನು ಈ ಕುರಿತು ಹೆಚ್ಚಿನ ಗಮನ ನೀಡಿದ್ದಾಗಿ ತಿಳಿಸಿದ್ದಾರೆ.
Advertisement
Proud moment for Hanuma Vihari as he becomes the 292nd player to represent #TeamIndia in Tests.#ENGvIND pic.twitter.com/M5qh0Y54E0
— BCCI (@BCCI) September 7, 2018
Advertisement
ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯಕ್ಕೆ ತಂಡದ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಆಗಿದ್ದು, ಆರ್ ಅಶ್ವಿನ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಪಾಂಡ್ಯ ಸ್ಥಾನದಲ್ಲಿ ಹನುಮ ವಿಹಾರಿಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ 2 ಪಂದ್ಯಗಳಿಗೆ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಸಮಿತಿ ಆಯ್ಕೆ ಮಾಡಿತ್ತು.
Advertisement
ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿದ್ದರು.
Advertisement
ಹನುಮ ವಿಹಾರಿ ಸಾಧನೆ:
ಪ್ರಥಮ ದರ್ಜೆ ಕ್ರಿಕೆಟ್ – 63 ಪಂದ್ಯ, 5,142 ರನ್, 59.79 ಸರಾಸರಿ
ಲಿಸ್ಟ್ ಎ ಕ್ರಿಕೆಟ್- 56 ಪಂದ್ಯ, 2268 ರನ್, 83.90 ಸರಾಸರಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Here's our Playing XI for the game.#ENGvIND pic.twitter.com/AmDSpS2Tyw
— BCCI (@BCCI) September 7, 2018
"When I get an opportunity, I want to make it count" – @Hanumavihari had said before joining the team in England. Just the right time to listen in to Test debutant #HanumaVihari on his expectations, aspirations & preparations #ENGvIND
Video Link ???? https://t.co/Zd0iGw79BB pic.twitter.com/QJQwJp7QP3
— BCCI (@BCCI) September 7, 2018