ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

Public TV
1 Min Read
hansika 1 1

`ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani), ಉದ್ಯಮಿ ಸೊಹೈಲ್ ಕಥುರಿಯಾ (Sohael Katuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ನಟಿ ಭಾರಿ ಟ್ರೋಲ್ ಆಗಿದ್ದಾರೆ. ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದು ಹನ್ಸಿಕಾಗೆ ಟ್ರೋಲ್ ಮಾಡ್ತಿದ್ದಾರೆ.

hansika 1

ಬಹುಭಾಷಾ ನಟಿ ಹನ್ಸಿಕಾ ಡಿಸೆಂಬರ್ 4ರಂದು ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಮ್ಮ ವಿವಾಹದ ಫೋಟೋಸ್‌ಗಳನ್ನ ನಟಿ ಶೇರ್ ಮಾಡಿದ್ದಾರೆ. ಬ್ರೈಟ್ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಬೆನ್ನಲ್ಲೇ ನಟಿಗೆ ಖಡಕ್ ಪ್ರಶ್ನೆಯೊಂದು ಎದುರಾಗಿದೆ. ನಿಮ್ಮ ಮದುವೆಗೆ ಎಲ್ಲಾ ಹೊಸದು ಆದರೆ, ಗಂಡ ಯಾಕೆ ಹಳಬ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

 

View this post on Instagram

 

A post shared by Hansika Motwani (@ihansika)

ಹನ್ಸಿಕಾ ಪತಿ ಸೊಹೈಲ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. ಹನ್ಸಿಕಾ ಬೆಸ್ಟ್ ಫ್ರೆಂಡ್ ರಿಂಕೆ ಬಜಾಜ್ (Rinky Bajaj) ಅವರನ್ನ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಡಿವೋರ್ಸ್ (Divorce) ಪಡೆದುಕೊಂಡರು. ಬಳಿಕ ಸೊಹೈಲ್ ಜೀವನಕ್ಕೆ ಹನ್ಸಿಕಾ ಎಂಟ್ರಿಯಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ ಈ ಜೋಡಿ ಮದುವೆಯಾಗಿದ್ದಾರೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ನಟಿಗೆ ಭಾರಿ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಚುಮು ಚುಮು ಚಳಿಗೆ ಜಾನ್ವಿಯ ಹಸಿಬಿಸಿ ಫೋಟೋಸ್

 

View this post on Instagram

 

A post shared by Hansika Motwani (@ihansika)

ಇನ್ನೂ ನಟಿಯ ಮದುವೆ ಕಲರ್‌ಫುಲ್ ಫೋಟೋಸ್ ನೋಡಿ ಅಭಿಮಾನಿಗಳು ನವಜೋಡಿಗೆ ಶುಭಹಾರೈಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *